ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ಇಳಿದ ಶಾಸಕಿ ಹೆಬ್ಬಾಳ್ಕರ್ 

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ಇಳಿದ ಶಾಸಕಿ ಹೆಬ್ಬಾಳ್ಕರ್ 

ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆಯ ನಿಮಿತ್ಯವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವನಿತಾ ಗೊಂದಳಿಯವರ ಪರ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ 31ನೇ ವಾರ್ಡ್ ನ ಕೆಲವು ಪ್ರದೇಶಗಳಲ್ಲಿ ಪ್ರಚಾರ ಸಭೆಗಳನ್ನು ಕೈಗೊಂಡು ಮತ ಯಾಚಿಸಿದರು.

ಪ್ರಚಾರದ ಸಮಯದಲ್ಲಿ ವಿಜಯನಗರದ ಜನತಾ ಕಾಲೋನಿಯ ಜನರು ಅಲ್ಲಿನ ನೀರಿನ ಹಾಗೂ ಬೀದಿ ದೀಪಗಳ ಬಗ್ಗೆ ಸಮಸ್ಯೆಯನ್ನು ವ್ಯಕ್ತಪಡಿಸಿದ್ದು, ತ್ವರಿತ ಗತಿಯಲ್ಲಿ ಕೆಇಬಿ ಇಲಾಖೆಯವರಿಗೆ ಕರೆ ಮಾಡಿ ದೀಪಗಳನ್ನು ಅಳವಡಿಸಿ ಕೊಟ್ಟಿದ್ದೇನೆ ಜೊತೆಗೆ ಮಹಾನಗರ ಪಾಲಿಕೆಯ ನೀರು ಸರಬರಾಜು ಮಾಡುವ ಅಧಿಕಾರಿಗಳಿಗೂ ಸಹ ಕರೆ ಮಾಡಿ ನೀರಿನ ವ್ಯವಸ್ಥೆ ಮಾಡಿ ಕೊಡಲು ತಿಳಿಸಿದ್ದೇನೆ. ಪಕ್ಷದ ಅಭ್ಯರ್ಥಿಯಾದ ವನಿತಾ ಗೊಂದಳಿಯವರಿಗೆ ನಿಮ್ಮಮತಗಳನ್ನು ನೀಡುವ ಮುಖೇನ ಅವರನ್ನು ಹರಿಸಿ, ಆಶೀರ್ವದಿಸಿ ಎಂದು ವಿನಂತಿಸಿಕೊಳ್ಳುತ್ತೇನೆ ಎಂದರು.