ಪಾಲಿಕೆ ಚುನಾವಣೆ: ಮಾಧುರಿ ಜಾಧವ್ ಬಿರುಸಿನ ಪ್ರಚಾರ

ಬೆಳಗಾವಿ: ಬೆಳಗಾವಿಯ ಮಹಾನಗರ ಪಾಲಿಕೆ ಚುನಾವಣೆಗೆ ವಾರ್ಡ್ ನಂ 49 ರಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿರುವ ಮಾಧುರಿ ಜಾಧವ್ ಅವರು  ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮನೆ ಮನೆಗೆ ತೆರಳಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ‌

ಬೆಳಗಾವಿ ದಕ್ಷಿಣ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂ 49  ರಲ್ಲಿ ಮಾಧುರಿ ಜಾಧವ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದು ಇವರ ಗುರುತು 'ಡೀಸಲ್ ಪಂಪ್' ಆಗಿದೆ. ಇವರು ಅನೇಕ ವರ್ಷಗಳಿಂದ ಸಮಾಜ ಸೇವೆ ಮಾಡುತ್ತಾ ಬಂದಿರುವ ಮಾಧುರಿ ಜಾಧವ ಅವರು, ನಗರ ಸೇವಕರಾಗಿ ಆಯ್ಕೆ ಆದರೆ ಮತ್ತಷ್ಟು ಹೆಚ್ಚು ಜನರ ಸೇವೆ ಮಾಡುತ್ತೇನೆ, ಗಟರ ಸಮಸ್ಯೆ, ಟ್ರ್ಯಾನೇಜ್ ಸಮಸ್ಯೆ, ಕಸ ವಿಲೇವಾರಿ ಸಮಸ್ಯೆಗಳನ್ನು ಬೆಗೆಹರಿಸಿ ಒಂದು ಉತ್ತಮವಾದ ವಾತಾವರಣ ನಿರ್ಮಾಣ ಮಾಡುವ ಗುರಿಯನ್ನು ಅವರು ಹೊಂದಿದ್ದಾರೆ. ‌

ಸೆಪ್ಟೆಂಬರ್ 3 ರಂದು ನಡೆಯುವ ಪಾಲಿಕೆ ಚುನಾವಣೆಗೆ ವಾರ್ಡ್ ನಂಬರ್ 49 ರ ಮತದಾರರು ಡಿಸೇಲ್ ಪಂಪ್ ಗೆ ಮತ ನೀಡಿ ಒಂದು ಅವಕಾಶ ನೀಡುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ. ‌