ವಾರ್ಡ್ ನಂ 32 ರಿಂದ ಸರಿತಾ ಶಿಪುರಕ ಗೆಲುವು ನಿಶ್ಚಿತ 

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ರಂಗೆರಿದೆ. ಪಾಲಿಕೆಯ 58 ವಾರ್ಡಗಳಲ್ಲಿ ಅನೇಕ ಪಕ್ಷಗಳು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ‌ಆದರೆ ವಾರ್ಡ್ ‌ನಂ 32ವರ ಪಕ್ಷೇತರ ಅಭ್ಯರ್ಥಿ ಸರಿತಾ ಶಪುರಕರ ಅವರು ಕೂಡಾ ಪ್ರತಿಸ್ಪರ್ಧಿಗಳಿಗೆ ಪುಲ್ ಪೈಟ್ ನೀಡುತ್ತಿದ್ದಾರೆ. ‌

ಪಕ್ಷೇತರ ಅಭ್ಯರ್ಥಿಯಾಗಿ ವಾರ್ಡ್ ನಂ 32 ರಿಂದ ಸರಿತಾ ಶಿಪುರಕರ ಅವರು ಪಕ್ಷೇತರ ಅಭ್ಯರ್ತಿಯಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ.‌ ಪಕ್ಷೇತರ ಅಭ್ಯರ್ಥಿ ಆಗಿರುವುದರಿಂದ ಯಾವುದೇ ಪಕ್ಷದ ಅಜೆಂಡಾ ನಮಗೆ ಸಂಬಂಧ ಬರುವುದಿಲ್ಲ ಎಂದು ಸರಿತಾ ಪತಿ, ಪ್ರತಿಕ ಅವರು ತಿಳಿಸಿದ್ದಾರೆ. 

ಮುಂದುವರೆದರು ಮಾತನಾಡಿದ ಅವರು, ಸರಿತಾ ಅವರು ಗೆದ್ದು ಬಂದರೆ ನಮ್ಮ ವಾರ್ಡಿನ ಯಾವುದೇ ನಿರ್ಣಯಗಳು ಸ್ವತಃ ಕೈಗೊಳ್ಳಬಹುದು. ಈಗಾಗಲೇ ನಾವು ಮೆನೆ ಮನೆಗೆ ತೆರಳಿ ಪ್ರಚಾರ ಕೈ ಗೊಂಡಾಗ ಜನರು ಡ್ರೇನೆಜ್ ಸಮಸ್ಯೆ ಕುರಿತು ಹೇಳಿದ್ದಾರೆ. ನಮ್ಮ ಪ್ರದೇಶದಲ್ಲಿ ಸರಿಯಾದ ಬಿದಿ ದೀಪಗಳು ಇಲ್ಲದೆ ಇದರುವುದರಿಂದ ಮಕ್ಕಳಿಗೆ, ಮಹಿಳೆಗರಿಗೆ ತೊಂದರೆ ಆಗುತ್ತಿದೆ ಅದಕ್ಕಾಗಿ ನಾವು ವ್ಯವಸ್ಥಿತ ಬಿದಿ ದಿಪಗಳ ಜೊತೆಗೆ ಸಿಸಿಟಿವಿ ಅಳವಡಿಕೆ ಮಾಡಲಿದ್ದೇವೆ ಎಂದು ತಿಳಿಸಿದರು. 

ಹನುಮಾನ್ ನಗರ ಹಂತಹ ಪ್ರದೇಶದಲ್ಲಿ ಕಸ ವಿಲೇವಾರಿಯ ಸಮಸ್ಯೆ ಬಹಳಷ್ಟು ಇದೆ ಗಾಗಾಗಿ ಆ ಸಮಸ್ಯೆಗೆ ಪರಿಹಾರ ನೀಡಲಾಗುವುದು, ನಾವು ವಕೀಲರಾಗಿರುವುದರಿಂದ ನಮ್ಮ ಪ್ರದೇಶದಲ್ಲಿ ಕಲಹಗಳು ಸಂಭವಿಸಿದಾಗ ಜನರು ಕೋರ್ಟ್ ಗೆ ಹೊಗುವುದಕಿಂತ ಮುಂಚೆ ಜನರನ್ನು ಕರೆದು ಅವರ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡಲಿದ್ದೇವೆ ಎಂದು ತಿಳಿಸಿದರು. ‌

ಪ್ರತಿ ನಿತ್ಯ ಪ್ರಚಾರ ಮಾಡಲಾಗುತ್ತಿದೆ. ಜನರು ಒಳ್ಳೆಯ ಸಹಕಾರ ನೀಡಿದ್ದಾರೆ. ಹಾಗಾಗಿ ಬರುವ ಸಪ್ಟೆಂಬರ್ 3ರ ರಂದು ವಾರ್ಡ್ ನಂ 32 ರಿಂದ ಸರಿತಾ ಶಿಪುರಕರ ಅವರ ಗುರುತಾಗಿರುವ ಪೆನ್ ಚಿನ್ಹೆಗೆ ಮತ ನೀಡಿ ಎಂದು ಅಮರು ಮನವಿ ಮಾಡಿಕೊಂಡರು.