ಸಿ.ಟಿ ರವಿಗೆ ಟಾಂಗ್ ಕೊಟ್ಟ ಡಿ. ಕೆ ಶಿವಕುಮಾರ್

ಸಿ.ಟಿ ರವಿಗೆ ಟಾಂಗ್ ಕೊಟ್ಟ ಡಿ. ಕೆ ಶಿವಕುಮಾರ್

ಕಾಂಗ್ರೆಸ್ ನಾಯಕರಿಗೆ ಪ್ರಮೋಷನ್ ಬೇಕಾದರೇ ಒಂದು ಸರ್ಟಿಫಿಕೆಟ್ ಇರುತ್ತದೆ.ಡಿ.ಕೆ ಶಿವಕುಮಾರ ಕೊತ್ವಾಲ್ ರಾಮಚಂದ್ರ ಶಿಷ್ಯಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಡಿ.ರವಿ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಪ್ರತ್ಯುತ್ತರ ನೀಡಿದರು.

ಇಂದು ನಗರದ ಕಾಂಗ್ರೆಸ್ ಭವನದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿ.ಟಿ. ರವಿ ಅವರೇ ಕೊತ್ವಾಲ್ ರಾಮಚಂದ್ರ ಶಿಷ್ಯ ಇರಬಹುದು.ಪಾಪ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸರ್, ಉಮಾಭಾರತಿ ಅವರಿಗೂ ಒಂದು ಸರ್ಟಿಫಿಕೇಟ್ ಇತ್ತು. ಇನ್ನೂ ಸಾಕಷ್ಟು ಹೆಸರುಗಳಿವೆ ಅದು ಈಗ ಬೇಡ ಎಂದರು.

ಎಂಇಎಸ್ ಕಾಂಗ್ರೆಸ್‌ನ ಬಿ ಟಿಂ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಉತ್ತರಿಸಿದ ಅವರು, ಅವರ ಸ್ವಂತಕ್ಕೆ ಏನು ಬೇಕಾದರೂ ಅಂದುಕೊಳ್ಳಲಿ. ನಾವು ಯಾರನ್ನೂ ಅಗೌರವದಿಂದ ಕಾಣುವುದಿಲ್ಲ. ಬಿಜೆಪಿಯವರನ್ನು ಗೌರವದಿಂದ ಕಾಣುತ್ತೇವೆ. ಎಂಇಎಸ್‌ನವರನ್ನು ಗೌರವದಿಂದ ಕಾಣುತ್ತೇವೆ ಎಂದು ಎಂಇಎಸ್ ಬಗ್ಗೆ ಡಿಕೆಶಿ ಮೃದು ಸ್ವಭಾವದ ಹೇಳಿಕೆ ನೀಡಿದ ಅವರು, ಈ ಹಿಂದೆ ಸಿದ್ದರಾಮಯ್ಯನವರ ಸರಕಾರದಲ್ಲಿ ಬೆಳಗಾವಿ ಉತ್ತರದಲ್ಲಿ ಶಾಸಕರಾಗಿದ್ದ ಫಿರೋಜ್ ಸೇರ್ ಹಾಗೂ ದಕ್ಷಿಣ ಕ್ಷೇತ್ರದ ಶಾಸಕರಾಗಿದ್ದ ಸಂಭಾಜಿ ಪಾಟೀಲ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದರು.