ಹಿಂದೂ ಹುಡುಗಿಯರ ಸುದ್ದಿಗೆ ಬಂದ್ರೆ ಹುಷಾರ್

ಹಿಂದೂ ಹುಡುಗಿಯರ ಸುದ್ದಿಗೆ ಬಂದ್ರೆ ಹುಷಾರ್

ಹಿಂದೂ ಹುಡುಗಿಯರನ್ನು ಬಲೆಗೆ ಬೀಳಿಸಿ ಅವರನ್ನು ಓಡಿಸಿಕೊಂಡು ಹೋಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಹೇಳಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರವು ಗೋಹತ್ಯೆಯಲ್ಲಿ ತೊಡಗಿರುವವರ ವಿರುದ್ಧವೂ ಕಠಿಣವಾಗಿ ವರ್ತಿಸಲಿದೆ ಎಂದು ಕೂಡಾ ಅವರು ತಿಳಿಸಿದರು."ನನ್ನ ಸರ್ಕಾರವು ಕಠಿಣ ನಿಯಮಗಳೊಂದಿಗೆ ಹಲವಾರು ಕಾನೂನುಗಳನ್ನು ತಂದಿದೆ. ಗೋಹತ್ಯೆಯಿಂದ ಹಸುಗಳನ್ನು ರಕ್ಷಿಸುವ ಕಾನೂನು, ಭೂ ಕಬಳಿಕೆಯನ್ನು ನಿಲ್ಲಿಸುವ ಕಾನೂನು ತಂದು ತಪ್ಪಿತಸ್ಥರನ್ನು ಶಿಕ್ಷಿಸಾಲಾಗುತ್ತದೆ' ಎಂದರು. ನಾವು ಲವ್ ಜಿಹಾದ್ ನಿಲ್ಲಿಸಲು ನಾವು ಕಾನೂನು ತಂದಿದ್ದೇವೆ. ಹಿಂದೂ ಹುಡುಗಿಯರನ್ನು ಬಲೆಗೆ ಬೀಳಿಸುವ ಮತ್ತು ಅವರೊಂದಿಗೆ ಪರಾರಿಯಾಗುವವರೊಂದಿಗೆ ನಾವು ಕಟ್ಟುನಿಟ್ಟಾಗಿ ವ್ಯವಹರಿಸುತ್ತಿದ್ದೇವೆ' ಎಂದು ಎಚ್ಚರಿಕೆ ನೀಡಿದರು.