ಲೋಂಡಾದಲ್ಲಿ ಕಸಾಯಿಖಾನೆಗೆ ಒಯ್ತಿದ್ದ 2 ಹಸು 1 ಎತ್ತು ರಕ್ಷಣೆ

ಲೋಂಡಾದಲ್ಲಿ ಕಸಾಯಿಖಾನೆಗೆ ಒಯ್ತಿದ್ದ 2 ಹಸು  1 ಎತ್ತು ರಕ್ಷಣೆ

ಖಾನಾಪುರ ತಾಲೂಕಿನ ಲೋಂಡಾದಲ್ಲಿ ಕಸಾಯಿಖಾನೆಗೆ ಕೊಂಡೊಯ್ಯುತ್ತಿದ ಎರಡು ಹಸು ಮತ್ತು ಎತ್ತುಗಳನ್ನು ರಕ್ಷಿಸಿ ಗೋಶಾಲೆಗೆ ರವಾನೆ ಮಾಡಲಾಗಿದೆ.ಹೌದು ಕಸಾಯಿಖಾನೆಗೆ ಕೊಂಡೊಯ್ಯುತ್ತಿದ್ದ ಎರಡು ಹಸು ಮತ್ತು ಎತ್ತುಗಳನ್ನು ಬಿಡಿಸಿಕೊಂಡು ಗೋಶಾಲೆಗೆ ಕಳುಹಿಸಿದ ಘಟನೆ ಬೆಳಕಿಗೆ ಬಂದಿದೆ. ಲೋಂಡಾ ಗ್ರಾಮದ ಯುವ ಕಾರ್ಯಕರ್ತರಾದ ಪ್ರವೀಣ್ ಮಾಶೇಲ್ಕರ್ ಅವರು ಬಿಜೆಪಿ ಯುವ ಮುಖಂಡ ಪಂಡಿತ್ ಓಗಲೆ ಅವರ ಗಮನಕ್ಕೆ ಈ ವಿಷಯ ತಂದು ಆ ಕಸಾಯಿ ಹಾಗೂ ಆತನ ಟೆಂಪೆÇೀವನ್ನು ಖಾನಾಪೂರ ಪೆÇಲೀಸ್‍ರಿಗೆ ಒಪ್ಪಿಸಿದ್ದಾರೆ. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರಾದ ಪ್ರವೀಣ್ ಸಾತೆನ್ನವರ್, ದಿನೇಶ್ ಕದಂ, ರಾಮಚಂದ್ರ ಲೋಂಧೇಕರ್, ಕಿರಣ್ ತುಡೇಕರ್, ಸಂಜು ಗುರವ ಗೋಪಾಲ್ ಭೆಕನೆ ಉಪಸ್ಥಿತರಿದ್ದರು.