ಖಾನಾಪುರ: ಪೊಲೀಸ್ ತರಬೇತಿ ಶಾಲೆ ಖಾನಾಪುರದಲ್ಲಿ ನಡೆದ ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೇವೆಯ ಸಂದರ್ಭದಲ್ಲಿ ಎದುರಾಗಬಹುದಾದ ಕಾನೂನು ತೊಡಕುಗಳನ್ನು ಗುರುತಿಸುವುದು ಹಾಗೂ ಅವುಗಳಿಂದ ದೂರವಿರುವ ವಿಧಾನಗಳ ಕುರಿತು ಮಾಹಿತಿ ನೀಡಲಾಯಿತು.
ನ್ಯಾಯಾಧೀಶರು, ಕಾನೂನು ತಜ್ಞರು ಹಾಗೂ ವಿವಿಧ ಇಲಾಖೆಗಳ ಪರಿಣಿತರು ಪೊಲೀಸ್ ಸಿಬ್ಬಂದಿಗೆ ಕಾನೂನು ಸಂಬಂಧಿತ ಅಂಶಗಳು, ತನಿಖೆ ಮತ್ತು ಕರ್ತವ್ಯ ನಿರ್ವಹಣೆಯಲ್ಲಿ ಅನುಸರಿಸಬೇಕಾದ ಕಾನೂನು ನಿಯಮಗಳು, ದಾಖಲೆಗಳ ನಿರ್ವಹಣೆ ಹಾಗೂ ನ್ಯಾಯಾಲಯದ ಪ್ರಕ್ರಿಯೆಗಳ ಕುರಿತು ಮಾರ್ಗದರ್ಶನ ನೀಡಿದರು.
ಈ ಜಾಗೃತಿ ಕಾರ್ಯಕ್ರಮದಲ್ಲಿ 1ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರು, ಡಾ. ಪುಷ್ಪಾ (BIMS), ಡಾ. ರಮೇಶ್ ದುಂಡಗಿ, ಡಾ. ಜಗನ್ನಾಥ್ ಸಿ.ಕೆ. (RFSL), ಮಲ್ಲಿಕಾರ್ಜುನ ಕೊಣ್ಣೂರು, ಬಿ.ವಿ. ಪಾಟೀಲ ಹಾಗೂ ವೀರಯ್ಯ ಹಿರೇಮಠ ಸೇರಿದಂತೆ ವಿವಿಧ ತಜ್ಞರು ಭಾಗವಹಿಸಿ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾನೂನು ಅರಿವು ಹೆಚ್ಚಿಸಿಕೊಳ್ಳುವ ಮೂಲಕ ಸೇವೆಯಲ್ಲಿ ಕಾನೂನು ತೊಡಕುಗಳನ್ನು ತಪ್ಪಿಸುವ ಕುರಿತು ಮಾಹಿತಿ ಪಡೆದರು.
