ಆಟೊ ಚಾಲಕನನ್ನ ವಿವಸ್ತ್ರಗೊಳಿಸಿ ಮೂತ್ರ ವಿಸರ್ಜನೆ ಮಾಡಿದ ವೈದ್ಯರ ಗ್ಯಾಂಗ್..!

ಆಟೊ ಚಾಲಕನನ್ನ ವಿವಸ್ತ್ರಗೊಳಿಸಿ ಮೂತ್ರ ವಿಸರ್ಜನೆ ಮಾಡಿದ ವೈದ್ಯರ ಗ್ಯಾಂಗ್..!

ಬೆಂಗಳೂರಿನಲ್ಲಿ ವೈದ್ಯರ ಗ್ಯಾಂಗ್ ವೊಂದು ಕುಡಿದ ಸೋಗಿನಲ್ಲಿ ಆಟೊ ಚಾಲಕನನ್ನ ವಿವಸ್ತ್ರಗೊಳಿಸಿ ಮೂತ್ರ ವಿಸರ್ಜನೆ ಮಾಡಿ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ರೋಗಿಗಳ ಮುಂದೆ ಕೂಗಾಟ ನಡೆಸಿ ರೌಡಿ ವರ್ತನೆ ತೋರಿರುವ ಆರೋಪದ ಹಿನ್ನೆಲೆಯಲ್ಲಿ, ಚಾಲಕನನ್ನ ಮನಬಂದಂತೆ ಥಳಿಸಿ ಶೌಚಾಲಯಕ್ಕೆ ಕರೆದೊಯ್ದು ಮೂತ್ರ ವಿಸರ್ಜನೆ ಮಾಡಿ ಹೀನ ಕೃತ್ಯ ನಡೆಸಿದ್ದಾರೆ.ಯಲಹಂಕ ನಿವಾಸಿ 26 ವರ್ಷದ ಆಟೊ ಚಾಲಕ ಮುರುಳಿ ಹಲ್ಲೆಗೊಳಗಾಗಿದ್ದು, ಚಾಲಕ ನೀಡಿದ ದೂರಿನ ಮೇರೆಗೆ ಖಾಸಗಿ ಆಸ್ಪತ್ರೆಯೊಂದರ ವೈದ್ಯ ರಾಕೇಶ್ ಶೆಟ್ಟಿಯನ್ನು ಬಂಧಿಸಲಾಗಿದೆ. ಇನ್ನೂ ಹಲ್ಲೆಯಲ್ಲಿ ಭಾಗಿಯಾಗಿದ್ದ ಆರೇಳು ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಯಲಹಂಕ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ ಎನ್ನಲಾಗಿದೆ.