ಅಪ್ಪನ ಸಮಾಧಿ ಬಳಿಯೇ ಬರ್ತ್ ಡೇ ಆಚರಿಸಿಕೊಂಡ ಬಾಲಕಿ

ಅಪ್ಪನ ಸಮಾಧಿ ಬಳಿಯೇ ಬರ್ತ್ ಡೇ ಆಚರಿಸಿಕೊಂಡ ಬಾಲಕಿ

ಕೊಪ್ಪಳದ 8 ವರ್ಷದ ಬಾಲಕಿಯೊಬ್ಬಳು ಕೋವಿಡ್‌ಗೆ ಬಲಿಯಾದ ತನ್ನ ತಂದೆಯ ಸಮಾಧಿ ಬಳಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾಳೆ.ಬಾಲಕಿಯ ಜನ್ಮದಿನ ಆಚರಣೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಕೊಪ್ಪಳದ ಕುಷ್ಟಗಿ ಪಟ್ಟಣದ ಚಂದನಾ ಎಂಬಾಕೆಯೇ ತನ್ನ ತಂದೆಯ ಸಮಾಧಿ ಬಳಿ ಬರ್ತ್ ಡೇ ಆಚರಿಸಿಕೊಂಡ ಬಾಲಕಿ. ಸ್ಪಂದನಾಳ ತಂದೆ ಮಹೇಶ್ ಕೊನಸಾಗರ ಅವರು ಕಳೆದ ಮೇ ತಿಂಗಳಲ್ಲಿ ಕೋವಿಡ್ ಗೆ ಬಲಿಯಾಗಿದ್ದಾರೆ. ತಂದೆಯಿಲ್ಲದ ಮೊದಲ ಜನ್ಮ ದಿನಾಚರಣೆಯನ್ನು ಅವರ ಸಮಾಧಿ ಬಳಿ ಆಚರಿಸಿ, ಅಗಲಿದ ತಂದೆಯ ಸಮಾಧಿಗೆ ಕೇಕ್ ಅರ್ಪಿಸಿದ ಬಾಲಕಿಯ ವಿಡಿಯೋಗೆ ನೆಟ್ಟಿಗರು ಮರುಕ ವ್ಯಕ್ತಪಡಿಸಿದ್ದಾರೆ.