ವಾರ್ಡ್ ನಂ 38ರ ಎಎಪಿ ಪಕ್ಷದ ಅಭ್ಯರ್ಥಿ ಅಲ್ತಾಪ್ ಬಾಳೆಕುಂದ್ರಿ ಬಿರುಸಿನ ಪ್ರಚಾರ

ವಾರ್ಡ್ ನಂ 38ರ ಎಎಪಿ ಪಕ್ಷದ ಅಭ್ಯರ್ಥಿ ಅಲ್ತಾಪ್ ಬಾಳೆಕುಂದ್ರಿ ಬಿರುಸಿನ ಪ್ರಚಾರ

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ಈ ಬಾರಿ ಆಮ್ ಆದ್ಮಿ ಪಕ್ಷವು ಕೂಡಾ ಮೊದಲ ಬಾರಿಗೆ ಸ್ಪರ್ಧೆ ಮಾಡತ್ತಿದ್ದು, ಭರ್ಜರಿ ಪ್ರಚಾರ ನಡೆಸಿ ರಾಷ್ಟ್ರೀಯ ಪಕ್ಷಗಳಿಗೆ ಪ್ರಬಲ ಪೈಪೋಟಿ ನೀಡುತ್ತಿದೆ.‌

ಬೆಳಗಾವಿ ಪಾಲಿಕೆ ಚುನಾವಣೆ ಒಟ್ಟು 58 ವಾರ್ಡಗಳಲ್ಲಿ 28 ವಾರ್ಡಗಳಿಗೆ ಸ್ಪರ್ಧೆ ನಡೆಸುತ್ತಿರುವ ಎಎಪಿ, ಈಗಾಗಲೆ ಪ್ರಚಾರ ಆರಂಭಿಸಿದೆ. ಎಎಪಿ ವಿರೊಧಿಗಳಿಗೆ ಪುಲ್ ಪೈಟ್ ನೀಡುತ್ತಿದೆ. ಇದೆ ಮೊದಲ ಬಾರಿಗೆ ಎಎಪಿ ಸ್ಪರ್ಧೆ ಮಾಡಿತ್ತಿರುವುದರಿಂದ ಎಎಪಿ ವತಿಯಿಂದ ವಾರ್ಡ್ ನಂ 38 ರಿಂದ ಅಲ್ತಾಪ್ ಬಾಳೆಕುಂದ್ರಿ ಅವರು ಸ್ಪರ್ಧೆ ಮಾಡುತ್ತಿದ್ದು, ಈಗಾಗಲೇ ಮೆನೆ ಮನೆಗೆ ತೆರಳಿ ಭರ್ಜರಿ ಕ್ಯಾಂಪೇನ್ ಪ್ರಾರಂಭಿಸಿದ್ದಾರೆ.‌

ಅಲ್ತಾಪ್ ಬಾಳೆಕುಂದ್ರಿ ಅವರು ಗಾಂಧಿ ನಗರ ಭಾಗದಲ್ಲಿ ಎಲ್ಲರಿಗೂ ಚಿರಪರಿತು, ಈಗಾಗಲೇ ತಮ್ಮ ಸಾಮಾಜಿಕ ಕೆಲಸಗಳಿಂದ ಗುರುತಿಸಿಕೊಂಡಿರುವ. ಅಲ್ತಾಪ್ ಬಾಳೆಕುಂದ್ರಿ ಅವರು ತಮ್ಮ ಕಚೇರಿಯನ್ನು ಕೂಡಾ ಪ್ರಾರಂಭಿಸಿದ್ದಾರೆ. 

ನಾನು ಈಗಾಗಲೆ ನಮ್ಮ ಭಾಗದ ಜನರಿಗೆ ಅನೇಕ ಕೆಲಸಗಳನ್ನು ಮಾಡಿಕೊಟ್ಟಿದ್ದೇನೆ ಹಾಗಾಗಿ ಮುಂದೆ ಪಾಲಿಕೆ ಚುನಾವಣೆಯಲ್ಲಿ ನಮ್ಮ ಕ್ಷೇತ್ರದ ಜನರು ನನ್ನನ್ನು ಗೆಲ್ಲಿಸಲಿದ್ದಾರೆ ಎಂದು ಅಲ್ತಾಪ್ ಅವರು ಹೇಳುತ್ತಾರೆ.