ಮತ್ತೆ ಬೆಳ್ಳಿತೆರೆಯಲ್ಲಿ ಮಿಂಚಲಿದ್ದಾರೆ ನಟಿ ರಮ್ಯಾ

ಮತ್ತೆ ಬೆಳ್ಳಿತೆರೆಯಲ್ಲಿ ಮಿಂಚಲಿದ್ದಾರೆ ನಟಿ ರಮ್ಯಾ

ನಟಿ ರಮ್ಯಾ ಮತ್ತೆ ಬೆಳ್ಳಿ ತೆರೆಗೆ ಮರಳುವ ಸೂಚನೆ ನೀಡಿದ್ದಾರೆ. ಅವರಿಗೆ ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಇದ್ದು, ಅವರು ಒಪ್ಪಿದರೆ ಹಲವಾರು ಸಿನಿಮಾ ಆಫರ್ ಗಳು ಅವರತ್ತ ಹರಿದು ಬರುತ್ತವೆ. ಆದರೆ ರಾಜಕೀಯಕ್ಕೆ ಕಾಲಿಟ್ಟ ಬಳಿಕ ರಮ್ಯಾಚಿತ್ರರಂಗದಿಂದ ದೂರ ಉಳಿದಿದ್ದರು. ಇದೀಗ ರಾಜಕೀಯದಿಂದಲೂ ದೂರ ಉಳಿದಿರುವ ಅವರು ಸಿನಿಮಾಗಳಲ್ಲಿ ನಟಿಸುವ ಸೂಚನೆ ನೀಡಿದ್ದಾರೆ. ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ಮತ್ತೆ ಅಭಿನಯಿಸುವ ಬಗ್ಗೆ ಹೇಳಿಕೊಂಡಿರುವ ರಮ್ಯಾ,"ನಾನು ಸಿನಿಮಾ ಮಾಡಲು ಒಪ್ಪಿಕೊಳ್ಳುವೆ ಎಂದು ಹೇಳಿದರೆ ಸಾಕಷ್ಟು ಜನರಿಗೆ ಖುಷಿಯಾಗುತ್ತದೆ. ನನ್ನ ಬಳಿ ಕೆಲ ಆಫರುಗಳು ಬಂದಿವೆ. ಅವುಗಳಿಗೆ ನಾನು ಹೇಳಬೇಕು ಎಂದು ಯೋಚನೆ ಮಾಡುತ್ತಿದ್ದೇನೆ.ನಾನು ಆಗಲ್ಲ ಎಂದು ಹೇಳಿದರೆ ಅನೇಕರು ಬೇಸರ ಮಾಡಿಕೊಳ್ಳುತ್ತಾರೆ' ಎನ್ನುವ ಮೂಲಕ ಮತ್ತೆ ಚಿತ್ರದಲ್ಲಿ ನಟಿಸುವ ಸೂಚನೆ ನೀಡಿದ್ದಾರೆ.