ರಾಜ್ಯದಲ್ಲಿ ಡೆಂಗ್ಯೂ ಮಾದರಿಯ ಮತ್ತೊಂದು ಸೋಂಕು ಪತ್ತೆ

ರಾಜ್ಯದಲ್ಲಿ ಡೆಂಗ್ಯೂ ಮಾದರಿಯ ಮತ್ತೊಂದು ಸೋಂಕು ಪತ್ತೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಡೆಂಗ್ಯೂ ಮಾದರಿಯ ಮತ್ತೊಂದು ಸೋಂಕು ಪತ್ತೆಯಾಗಿದೆ. ಈ ಪೈಕಿ ಥಂಬೋಸೈಟೋಪೆನಿಯಾ- ಪ್ಲೇಟ್ ಲೆಟ್ ಸಂಖ್ಯೆ ಕುಸಿತ ಕಾಣುವ ಸ್ಥಿತಿಯೊಂದಿಗೆ ವೈರಾಣು ಜ್ವರ ಇರುವುದು ಹೆಚ್ಚು ವರದಿಯಾಗುತ್ತಿರುವ ಪ್ರಕರಣಗಳಾಗಿವೆ.ಕೈಗಾರಿಕಾ ಪ್ರದೇಶಗಳ ಬಳಿ ಇರುವವರು ಈ ರೀತಿಯ ವೈರಲ್ ಜ್ವರಕ್ಕೆ ಹೆಚ್ಚು ದುರ್ಬಲರಾಗಿರುತ್ತಾರೆ ಹಾಗೂ ಹರಡುವ ಸಾಮರ್ಥ್ಯ ಹೊಂದಿರುತ್ತವೆ. ಈ ರೀತಿಯ ಜ್ವರವನ್ನು ಹಲವು ಮಂದಿ ಡೆಂಗ್ಯೂ ಎಂದು ತಪ್ಪಾಗಿ ಭಾವಿಸುವುದುಂಟು ಆದರೆ ಡೆಂಗ್ಯೂಗೆ ಟೆಸ್ಟ್ ಮಾಡಿಸಿದರೆ ನೆಗೆಟಿವ್ ವರದಿ ಬರುತ್ತದೆ. ಕೊಲಂಬಿಯಾ ಏಷ್ಯಾ, ಹೆಬ್ಬಾಳ (ಮಣಿಪಾಲ್ ಹಾಸ್ಪಿಟಲ್ಸ್ ನ ಸಲಹೆಗಾರರಾಗಿರುವ ಡಾ.ಇರ್ಫಾನ್ ಜಾವೀದ್ ಖಾಜಿ, ತಾವು ಪ್ರತಿ 5 ರೋಗಿಗಳ ಪೈಕಿ ಒಬ್ಬರಲ್ಲಿ ಈ ರೀತಿಯ ಕಡಿಮೆ ಪ್ಲೇಟ್ ಲೆಟ್ ಇರುವ ವೈರಲ್ ಫೀವರ್ ಇರುವ ಪ್ರಕರಣಗಳನ್ನು ನೋಡುತ್ತಿರುವುದಾಗಿ ಹೇಳಿದ್ದಾರೆ.ಸಾಮಾನ್ಯವಾದ ರೋಗಲಕ್ಷಣಗಳೆಂದರೆ ಮೈಯಾಲ್ಡಿಯಾ, ಜ್ವರ, ತಲೆನೋವು, ಕೆಲವೊಮ್ಮೆಮೇಲ್ಬಾಗದ ಶ್ವಾಸೇಂದ್ರಿಯ ಸೋಂಕು ಮತ್ತು GI ರೋಗಲಕ್ಷಣಗಳೊಂದಿಗೆ ಸಂಬಂಧಿಸಿದೆ ಎಂದು ತಿಳಿಸಿದ್ದಾರೆ. ಏಸ್ತರ್ ಸಿಎಂಐ ಆಸ್ಪತ್ರೆಯ ಆಂತರಿಕ ವೈದ್ಯ ವಿಭಾಗದ ಸಲಹೆಗಾರರಾಗಿರುವ ಡಾ.ಬೃಂದ ಈ ಮಾದರಿಯ ಹೊಸ ವೈರಾಣು ಜ್ವರದ ಬಗ್ಗೆ ಮಾತನಾಡಿದ್ದು, "ಕಡಿಮೆ ಪ್ಲೇಟ್ ಲೆಟ್ ಸಂಖ್ಯೆ ಎಂದಾಕ್ಷಣ ಅದು ಡೆಂಗ್ಯು ಆಗಿರಬೇಕೆಂದೇನೂ ಇಲ್ಲ. ಇತರ ವೈರಲ್ ಸೋಂಕಿನಿಂದಲೂ ಪ್ಲೇಟ್ ಲೆಟ್ ಗಳು ಕುಸಿತ ಕಾಣಬಹುದು, ನಿರ್ವಹಣೆಯೂ ಡೆಂಗ್ಯು ಮಾದರಿಯದ್ದೇ ಆಗಿರುತ್ತದೆ ಎಂದಿದ್ದಾರೆ.