ಸೆ.20 ರಿಂದ 1-5 ನೇ ತರಗತಿ ಆರಂಭ

ಸೆ.20 ರಿಂದ 1-5 ನೇ ತರಗತಿ ಆರಂಭ

1ರಿಂದ 5ನೇ ತರಗತಿಗಳನ್ನು ಸೆಪ್ಟೆಂಬರ್ 20 ರಿಂದ 50ರಷ್ಟು ಹಾಜರಾತಿಯೊಂದಿಗೆ ಆರಂಭಿಸಲು ಮಧ್ಯಪ್ರದೇಶ ಸರ್ಕಾರ ನಿರ್ಧರಿಸಿದೆ.ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ತೀರ್ಮಾನ

ಕೈಗೊಳ್ಳಲಾಗಿದೆ.ಶಾಲೆ ತೆರೆಯುವ ಸಂದರ್ಭದಲ್ಲಿ ಕೊರೋನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ನಿರ್ದೇಶನ ನೀಡಲಾಗಿದೆ. ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಬಯಸದಿದ್ದರೆ ಆನ್ ಲೈನ್ ತರಗತಿಗಳನ್ನು ಮುಂದುವರೆಸಬೇಕೆಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.8ನೇ ತರಗತಿ ಮೇಲ್ಪಟ್ಟ ತರಗತಿ, ಹಾಸ್ಟೆಲ್, ವಸತಿ ಶಾಲೆಗಳನ್ನು ಶೇಕಡ 100 ರಷ್ಟು ಹಾಜರಾತಿಯೊಂದಿಗೆ ಆರಂಭಿಸಲು ಸೂಚನೆ ನೀಡಲಾಗಿದೆ. ಎಲ್ಲಾ ಶಾಲಾ ಸಿಬ್ಬಂದಿಗಳಿಗೆ ಕೊರೋನಾ ಲಸಿಕೆ ಹಾಕಲು ತಿಳಿಸಲಾಗಿದೆ.ಸೋಂಕು ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಶಾಲೆ ಆರಂಭಿಸಲು ಕ್ರಮಕೈಗೊಂಡಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.