ಸರ್ಕಾರಿ ನೌಕರರಿಗೆ ಬಿಗ್ ಶಾಕ್ ; ಜೀನ್ಸ್, ಟೀ ಶರ್ಟ್ ಹಾಕಿದ್ರೆ ಕಠಿಣ ಕ್ರಮ

ಸರ್ಕಾರಿ ನೌಕರರಿಗೆ ಬಿಗ್ ಶಾಕ್ ; ಜೀನ್ಸ್, ಟೀ ಶರ್ಟ್ ಹಾಕಿದ್ರೆ ಕಠಿಣ ಕ್ರಮ

ಸರ್ಕಾರಿ ನೌಕರರಿಗೆ ಬಿಗ್ ಶಾಕ್ : ಜೀನ್ಸ್, ಟೀ ಶರ್ಟ್ ಹಾಕಿದ್ರೆ ಕಠಿಣ ಕ್ರಮಸರ್ಕಾರಿ ನೌಕರರು ಜೀನ್ಸ್ ಟೀ ಶರ್ಟ್ ಧರಿಸುವುದನ್ನು ಉತ್ತರಾಖಂಡ ಸರ್ಕಾರ ನಿಷೇಧಿಸಿದೆ. ಈ ಸಂಬಂಧ ಅದೇಶ ಹೊರಡಿಸಿರುವ ಭಾಗೇಶ್ವರ್ ಜಿಲ್ಲಾ ಮ್ಯಾಜಿಸ್ಟ್ರೇಟ್, ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ಸಭೆಗಳಲ್ಲಿ ಜೀನ್ಸ್ ಟೀ ಶರ್ಟ್ ಧರಿಸಿ ಬರುವುದು ಕಂಡು ಬರುತ್ತಿದೆ, ಇದು ಅಷ್ಟು ಸಮಂಜಸವಲ್ಲ.ಹಾಗಾಗಿ, ನೌಕರರು ಮತ್ತು ಅಧಿಕಾರಿಗಳು ಸಭೆಗಳಲ್ಲಿ ಕಡ್ಡಾಯವಾಗಿ ಜೀನ್ಸ್ ಅಲ್ಲದ ಬಟ್ಟೆಗಳನ್ನು ಧರಿಸಬೇಕು.ಶೀಘ್ರದಲ್ಲೇ ಸಿಬ್ಬಂದಿಗೆ ಡ್ರೆಸ್ ಕೋಡ್ ಅನ್ನು ತಿಳಿಸಲಾಗುವುದು. ಅದರಂತೆ ವಸ್ತ್ರಧರಿಸಬೇಕು. ತಪ್ಪಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.