ಸಾರ್ವಜನಿಕ ಸ್ಥಳದಲ್ಲೇ ಕಾಲೇಜು ಹುಡುಗ ಹುಡುಗಿಯ ಲಿಪ್‌ಲಾಕ್: ವಿಡಿಯೋ ವೈರಲ್

ಇತ್ತೀಚಿನ ದಿನಗಳಲ್ಲಿ ಯುವ ಜನತೆ ಬೇಕಾಬಿಟ್ಟಿ ಪಾರ್ವಡ್ ಆಗುತ್ತಿದೆ. ಯುವಕ-ಯುವತಿಯರಲ್ಲಿ ಹರೆಯ ಉಕ್ಕುತ್ತಿದ್ದಂತೆ ಎಲ್ಲೆಂದರಲ್ಲಿ ಮೈ ಮರೆಯುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಮುಂಬೈನ ಡೊಂಬಿವಲಿಯ ರೇಲ್ವೆ ಸ್ಟೇಷನ್‌ನಲ್ಲಿ ಕಪಲ್‌ವೊಂದು ಜನರನನ್ನು ಲೆಕ್ಕಿಸದೇ ಸಾರ್ವಜನಿಕ ಸ್ಥಳದಲ್ಲೇ ರೋಮಾನ್ಸ್ ಮಾಡುತ್ತಾ ಕಿಸ್ ಮಾಡುತ್ತಿದ್ದ ವಿಡಿಯೋವೊಂದು ವೈರಲ್ ಆಗಿತ್ತು. ಈ ಘಟನೆ ಮರೆಯಾಗುವ ಮುನ್ನವೇ ಬೆಳಗಾವಿ ನಗರದದ್ದೇ ಎಂದು ಹೇಳಲಾಗುತ್ತಿರುವ ವಿಡಿಯೋವೊಂದು ಸಕತ್ ವೈರಲ್ ಆಗಿದೆ. ಯುವಕ ಹಾಗೂ ಯುವತಿ ಹೆಗಲಿಗೆ ಕಾಲೇಜ್ ಬ್ಯಾಗ ಹಾಕಿಕೊಂಡು ಫೂಟ್‌ಪಾತ್‌ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ರೋಮಾನ್ಸ್ ಮಾಡಿರುವ ವಿಡಿಯೋ ಸೋಶಿಯಲ್ ಮಿಡೀಯಾದಲ್ಲಿ ಹರಿದಾಡುತ್ತಿದೆ. ಕಾಲೇಜು ಕಲೀರಪ್ಪ ಅಂತ ತಂದೆ ತಾಯಿ ಕಷ್ಟ ಪಟ್ಟು ಕಳುಹಿಸಿದ್ರೆ, ಈ ಕಿಡಿಗೇಡಿ ಮಕ್ಕಳು ಮಾಡೋದು ಈ ರೀತಿಯ ಮಣ್ಣು ತಿನ್ನುವ ಕೆಲಸ. ಈ ವೀಡಿಯೋ ಅನ್ನು ಅವರ ಫ್ಯಾಮಿಲಿ ವ್ಯಕ್ತಿಗಳು ನೋಡಿದ್ರೆ ಏನ್‌ ಕಥೆ. ಸಿಕ್ಕಾಪಟ್ಟೆ ಸ್ವಾತಂತ್ರ್ಯ ಕೊಟ್ಟು ಬೆಳೆಸಿದರೆ, ಈಗಿನ ಕಾಲದ ಮಕ್ಕಳು ಮಾಡೋದು ಈ ರೀತಿ ಹೊಲಸು ಕೆಲಸ.