ಪ್ರಬುದ್ಧ ಭಾರತದ ವೇದಿಕೆಯ ಮೂಲಕ ಡಿಮಾನೆಜೆಶನ್ , ನೋಟ ಬ್ಯಾನ್ ಬಗ್ಗೆ ಮಾಹಿತಿ ನೀಡಿದ ಅಯ್ಯರ್

ಪ್ರಬುದ್ಧ ಭಾರತದ ವೇದಿಕೆಯ ಮೂಲಕ ಡಿಮಾನೆಜೆಶನ್ , ನೋಟ ಬ್ಯಾನ್ ಬಗ್ಗೆ ಮಾಹಿತಿ ನೀಡಿದ ಅಯ್ಯರ್

ಬೆಳಗಾವಿ : "ಹೂ ಪೆಂಟೆಡ್ ಮಾಯ್ ಮನಿ ವೈಟ್ ?" ಪುಸ್ತಕದ ಬರಹಗಾರ ಶ್ರೀಯುತ. ಶ್ರೀ ಅಯ್ಯರ್ ಅವರು ಬೆಳಗಾವಿಯಲ್ಲಿ ಮೇ ೧, ಭಾನುವಾರದಂದು ಪ್ರಬುದ್ಧ ಭಾರತದ ವೇದಿಕೆಯ ಮೂಲಕ ಅನಾಣ್ಯೀಕರಣ (ಡಿಮಾನೆಟೈಜೆಶನ್, ನೋಟ ಬ್ಯಾನ್) ಯಾಕೆ ಮಾಡಲಾಯಿತು, ಮಾಡದಿದ್ದರೆ ಏನಾಗುತ್ತಿತ್ತು ಹಾಗೂ ಈ ವಿಷಯದ ಸುತ್ತಲಿನ ಸತ್ಯಾಸತ್ಯತೆಗಳ ಮೇಲೆ ಉಪನ್ಯಾಸವನ್ನು ನೀಡಿದರು. ಈ ಕಾರ್ಯಕ್ರಮವನ್ನು ಪ್ರಬುದ್ಧ ಭಾರತ ಬೆಳಗಾವಿ ಅನ್ನುವ ವೇದಿಕೆ ಆಯೋಜಿಸಿದ್ದು, ಕಾರ್ಯಕ್ರಮವು ಹಿಂದವಾಡಿಯಲ್ಲಿರುವ IMER ಹಾಲಿನಲ್ಲಿ‌ ಭಾನುವಾರ ಸಂಜೆ 6:00ಗಂಟೆಗೆ ಜರುಗಿತು. ಇವರೊಟ್ಟಿಗೆ ಶ್ರೀ. ದೀಪಕ ಕಾರಂಜಿಕರ ಸಹ ಉಪಸ್ಥಿತರಿದ್ದು, ಅವರು ಈ ಪುಸ್ತಕದ ಮರಾಠಿ ಅನುವಾದ "ವಿಘ್ನ ವಿರಾಮ" ಪುಸ್ತಕವನ್ನು ಬಿಡುಗಡೆ ಮಾಡಿದರು.‌ ಈ ಸಮಯದಲ್ಲಿ, ಶ್ರೀ ಅಯ್ಯರ್ ಅವರು 2011-2017 ರ ನಡುವೆ ನಡೆದ ಘಟನೆಗಳನ್ನು ಆಧರಿಸಿದ ಕಾಲ್ಪನಿಕ ಕಥೆ " who painted my money white ?"ನ ಬರಹಗಾರರಾಗಿದ್ದು, ಅನಾಣ್ಯೀಕರಣದ ಸುತ್ತಲಿನ ಸಂದರ್ಭಗಳನ್ನು ಎಳೆ‌ ಎಳೆಯಾಗಿ ಬಿಚ್ಚಿಟ್ಟರು. ಭಾರತದ ಮೇಲೆ ಕಪ್ಪು ಹಣದ ಪ್ರಭಾವ, ವಿರೋಧಿಗಳ ಸಂಚು, ಇದರಿಂದ ಭಾರತದ ರಾಜಕೀಯ ವ್ಯವಸ್ಥೆಯ‌ ಮೇಲೆ ಆಗುತ್ತಿರುವ ದುಷ್ಪರಿಣಾಮಗಳನ್ನು ಒಂದೊಂದಾಗಿ ವಿವರಿಸಿದರು. ಕಾರ್ಯಕ್ರಮದಲ್ಲಿ ಶ್ರೀ. ಸಚಿನ ಸಬ್ನಿಸ್ ಅವರು ಸ್ವಾಗತ ಭಾಷಣ ಹಾಗೂ ವಕ್ತಾರರ ಪರಿಚಯ ಮಾಡಿದರು, ಮುಖ್ಯ ಅತಿಥಿಗಳಾದ ಶ್ರೀ. ಸತೀಶ ಮೆಹ್ತಾ - ಚಾರ್ಟರಡ ಅಕೌಂಟಂಟ್ ಉಪಸ್ಥಿತರಿದ್ದು, ಅನಾಣ್ಯೀಕರಣದ ತಮ್ಮ ಅನುಭವಗಳನ್ನು ಅಧ್ಯಕ್ಷೀಯ ಭಾಷಣದಲ್ಲಿ ಮಂಡಿಸಿದರಲ್ಲದೆ, ಭಾರತೀಯ ವ್ಯವಸ್ಥೆಯಲ್ಲಿ ಡಿಜಿಟಲ್ ಪೆಯಮೆಂಟನಿಂದ ಆಗುತ್ತಿರುವ ಲಾಭ, GST ಉಪಯುಕ್ತತೆಯ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು. ಪ್ರಬುದ್ಧ ಭಾರತದ ಟ್ರಸ್ಟಿ ಶ್ರೀ. ಚೈತನ್ಯ ಕುಲಕರ್ಣಿ ಅವರು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಶ್ರೀ. ವೈಭವ ಬಾಡಗಿ ನಿರೂಪಿಸಿದರು ಹಾಗೂ ಡಾ. ಅನಿಲ ಗರಗ ಅವರು ವಂದನಾರ್ಪಣೆ ಮಾಡಿದರು.‌

ಪ್ರಬುದ್ದ ಭಾರತ - ಬೆಳಗಾವಿ : ದೇಶ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚಿತವಾಗುತ್ತಿರುವ ಪ್ರಸ್ತುತ ವಿಷಯಗಳು ಹಾಗೂ ಇನ್ನಿತರ ಮಹತ್ತರವಾದ ರಾಷ್ಟ್ರೀಯತಾ ಭಾವ ಜಾಗೃತಗೊಳಿಸುವ ವಿಷಯಗಳ ಮೇಲೆ ವಸ್ತುನಿಷ್ಠವಾದ ಉಪನ್ಯಾಸ ಕಾರ್ಯಕ್ರಮಗಳನ್ನು ವರ್ಷಪೂರ್ತಿ ಆಯೋಜಿಸುತ್ತದೆ. 2012ರಿಂದ ಇಲ್ಲಿಯ ತನಕ ಹಲವಾರು ಪ್ರತಿಷ್ಠಿತ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಖ್ಯಾತಿಯ ಗಣ್ಯಮಾನ್ಯರು ಪ್ರಬುದ್ಧ ಭಾರತ - ಬೆಳಗಾವಿ ವೇದಿಕೆಯ ಮೂಲಕ ಬೆಳಗಾವಿಗರಿಗೆ ಉಪನ್ಯಾಸಗಳನ್ನು ನೀಡಿರುತ್ತಾರೆ. ಸುಬ್ರಮಣ್ಯ ಸ್ವಾಮಿ, ರಾಮ ಮಾಧವ, ಪುಷ್ಪೇಂದ್ರ ಕುಲಶ್ರೇಷ್ಟ‌‌, ಸುಶೀಲ ಪಂಡಿತ್, ಮೆಜರ್. ಗೌರವ್ ಆರ್ಯಾ, ಮರೂಫ್ ರಾಜ಼ಾ, ಮಕರಂದ ಪರಾಂಜಪೆ,  ಇಂದುತಾಯಿ ಕತದಾರೆ ಹಾಗೂ ಡಾ. ದೇವಿ ಶೆಟ್ಟಿ ಇದರಲ್ಲಿ ಕೆಲವು ಪ್ರಮುಖ ಹೆಸರುಗಳು. ಪ್ರಬುದ್ಧ ಭಾರತ ಬೆಳಗಾವಿಯ ಬಗೆಗಿನ ಹೆಚ್ಚಿನ ಮಾಹಿತಿಗಾಗಿ 9480188877 ಸಂಪರ್ಕಿಸಬಹುದು.

ಶ್ರೀ ಅಯ್ಯರ್: ಇಂಜಿನಿಯರ್, ಸಂಶೋಧಕ, ವಾಣಿಜ್ಯೋದ್ಯಮಿ, ಬರಹಗಾರ, ವಕ್ತಾರ ಹಾಗೂ ಸಾಮಾಜಿಕ ಜಾಲತಾಣಗಳ ಪ್ರಭಾವಿ ವ್ಯಕ್ತಿ. 1983ರಲ್ಲಿ ಒಸ್ಮಾನಿಯಾ ಯುನಿವರ್ಸಿಟಿ, ಹೈದರಾಬಾದಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದ ಇವರು ಉನ್ನತ ವ್ಯಾಸಂಗವನ್ನು ಅಮೇರಿಕಾದ ಪ್ರತಿಷ್ಠಿತ ಕೊಲರಾಡೊ ಯುನಿವರ್ಸಿಟಿಯಲ್ಲಿ ಮಾಡಿರುತ್ತಾರೆ. ಇಲ್ಲಿಯ ವರೆಗೆ ತಮ್ಮ ಹೆಸರಿನಲ್ಲಿ ಒಟ್ಟು 37 ಪೇಟೆಂಟ್ ಹೊಂದಿದ್ದು, ಇನ್ನೂ 50ಕ್ಕೂ ಹೆಚ್ಚು ಪೇಟೆಂಟುಗಳ ಅನುಮೋದನೆ ಬಾಕಿ‌ ಇದೆ‌. ಸದ್ಯ ಇವರು ಕ್ಯಾಲಿಫೋರ್ನಿಯಾ ನಿವಾಸಿಯಾಗಿದ್ದು, ಭಾರತ ಪ್ರವಾಸದಲ್ಲಿ ಇರುತ್ತಾರೆ. NDTV frauds, National Herald, Who painted my money white ? ಇತ್ಯಾದಿ ಪುಸ್ತಕಗಳ ಮೂಲಕ ಪ್ರಸಿದ್ಧರಾದ ಇವರ ಕೆಲವು ಪುಸ್ತಕಗಳು amazon.com ನಲ್ಲಿ ಅತೀ ಹೆಚ್ಚು ಮಾರಾಟವಾದ ಪುಸ್ತಕ ಅನ್ನುವ ಹೆಗ್ಗಳಿಗಕೆಗೆ ಭಾಜನವಾಗಿವೆ. ಇವರ pgurus  ಯೂಟೂಬ್ ಚಾನೆಲ್ ಸಹ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಹೆಸರುವಾಸಿಯಾಗಿದೆ‌.