ಘನಘೋರ ರಸ್ತೆ ಅಪಘಾತ: ಐವರು ಸಾವು,7 ಮಂದಿಗೆ ಗಾಯ

ಘನಘೋರ ರಸ್ತೆ ಅಪಘಾತ: ಐವರು ಸಾವು,7 ಮಂದಿಗೆ ಗಾಯ

ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯಲ್ಲಿ ಸೋಮವಾರ ಜೀಪ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ಜಿಲ್ಲಾ ಜಿಲ್ಲೆಯ ರೋಹನ್‌ವಾಡಿ ಗ್ರಾಮದ ನಿವಾಸಿಗಳು ಶೇಗಾಂವ್ ಪಟ್ಟಣದ ದೇವಸ್ಥಾನಕ್ಕೆ ಪ್ರಾರ್ಥನೆ ಸಲ್ಲಿಸಲು ಜೀಪ್ ನಲ್ಲಿ ಹೋಗುತ್ತಿದ್ದಾಗ ದೇಲ್‌ಗಾಂವ್ ರಾಜಾ ನಗರದಲ್ಲಿ ಮುಂಜಾನೆ 5.30ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.ಜೀಪ್ ಟಿ-ಪಾಯಿಂಟ್ ತಲುಪಿದಾಗ, ಮಾರ್ಗ ಬದಲಿಸುವಲ್ಲಿ ಚಾಲಕ ಗೊಂದಲಕ್ಕೀಡಾಗಿದ್ದ. ಈ ವೇಳೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಟ್ರಕ್‌ಗೆ ಜೀಪ್ ಡಿಕ್ಕಿ ಹೊಡೆದಿದೆ ಎಂಬ ಮಾಹಿತಿ ದೊರೆತಿದೆ.