ಸ್ಟೀಪರ್ ಸೆಲ್ ಬಸ್‌ನಲ್ಲೇ ಬಾಲಕಿ ಮೇಲೆ ಅತ್ಯಾಚಾರ

ಸ್ಟೀಪರ್ ಸೆಲ್ ಬಸ್‌ನಲ್ಲೇ ಬಾಲಕಿ ಮೇಲೆ ಅತ್ಯಾಚಾರ

ಸ್ಲಿಪರ್ ಸೆಲ್ ಬಸ್‌ನಲ್ಲೇ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿರುವ ಘಟನೆ ಉತ್ತರ ಪ್ರದೇಶದ ಫಿರೋಝಾಬಾದ್‌ನಲ್ಲಿ ಬೆಳಕಿಗೆ ಬಂದಿದೆ.ಬಸ್‌ನ ಸಹಾಯಕನೇ ದುಷ್ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ. ಕಳೆದ ಸೋಮವಾರ ರಾತ್ರಿ 11 ಗಂಟೆಯ ವೇಳೆಗೆ ಸಂತ್ರಸ್ತ ಬಾಲಕಿ ತನ್ನ ಪೋಷಕರೊಂದಿಗೆ ಬದರ್‌ಪುರ್ ಪ್ರದೇಶದಲ್ಲಿ ಬಸ್ ಹತ್ತಿದ್ದಳು, ಔರಿಯಾ ಪ್ರದೇಶಕ್ಕೆ ಬಾಲಕಿಯ ಕುಟುಂಬ ತೆರಳಬೇಕಿತ್ತು.ಬಸ್‌ನಲ್ಲಿ ಬಾಲಕಿಯ ತಂದೆ-ತಾಯಿ ಕೆಳಗಡೆಯ ಸೀಟ್‌ನಲ್ಲಿ ಮಲಗಿದ್ದರೆ,ಬಾಲಕಿ ಮೇಲ್ಗಡೆಯ ಸೀಟ್‌ನಲ್ಲಿ ಮಲಗಿದ್ದಳು. ತಡರಾತ್ರಿ ಚಾಲಕ ಬಸ್ ನಿಲ್ಲಿಸಿದಾಗ, ಬಾಲಕಿಯ ಸೀಟ್‌ಗೆ ತೆರಳಿದ ಬಸ್‌ನ ಸಹಾಯಕ ಅಶು ಎಂಬಾತ.ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಆರೋಪಿಸಲಾಗಿದೆ. ಸಂತ್ರಸ್ತೆಯ ತಾಯಿ ನೀಡಿದ ದೂರಿನ ಮೇರೆಗೆ ಶಿಕೋಹಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.