ಹಿಜಾಬ್ ಬಗ್ಗೆ ಹೈಕೋರ್ಟ ಆದೇಶ ಎಲ್ಲರೂ ಗೌರವಿಸಿ, ಪಾಲಿಸಿ: ಸಿಎಂ ಬೊಮ್ಮಾಯಿ ಮನವಿ

ಹಿಜಾಬ್ ಬಗ್ಗೆ ಹೈಕೋರ್ಟ ಆದೇಶ ಎಲ್ಲರೂ ಗೌರವಿಸಿ, ಪಾಲಿಸಿ: ಸಿಎಂ ಬೊಮ್ಮಾಯಿ ಮನವಿ

ಹಿಜಾಬ್ ಬಗ್ಗೆ ಕರ್ನಾಟಕ ಹೈಕೋರ್ಟ್ ಆದೇಶವನ್ನು ಎಲ್ಲ ವಿದ್ಯಾರ್ಥಿಗಳು ಮತ್ತು ಪೆÇೀಷಕರು ಗೌರವಿಸಬೇಕು, ಪಾಲಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿಕೊಂಡಿದ್ದಾರೆ.ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಭಾಗ ಅಲ್ಲ. ಎಲ್ಲರೂ ಸರ್ಕಾರದ ಸಮವಸ್ತ್ರ ಆದೇಶವನ್ನು ಪಾಲಿಸಬೇಕು ಎಂದು ಹೈಕೋರ್ಟ ಇಂದು ಮಹತ್ವದ ತೀರ್ಪು ಪ್ರಕಟಿಸಿರುವ ಹಿನ್ನೆಲೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ ಈಗತಾನೇ ಮಾಧ್ಯಮಗಳಿಂದ ಹೈಕೋರ್ಟ್‍ನ ಸಮವಸ್ತ್ರದ ತೀರ್ಪಿನ ಮಾಹಿತಿ ಬಂದಿದೆ. ಸಮವಸ್ತ್ರವನ್ನ ಎತ್ತಿ ಹಿಡಿದಿದೆ. ಮಕ್ಕಳ ಶಿಕ್ಷಣದ ಪ್ರಜ್ಞೆ ಇದೆ. ಮಕ್ಕಳಿಗೆ ಶಿಕ್ಷಣಕ್ಕಿಂತ ಬೇರೆ ಯಾವುದು ಇಲ್ಲ. ಇದನ್ನ ಮಕ್ಕಳು ಪಾಲಿಸಬೇಕು.ಇದನ್ನ ಅನುμÁ್ಠನಕ್ಕೆ ತರುವ ಸಂದರ್ಭದಲ್ಲಿ ಎಲ್ಲರು ಸಹಕರಿಸಬೇಕು. ಶಾಂತಿ ಸುವ್ಯವಸ್ಥೆ ಬಹಳ ಮುಖ್ಯ. ನಾನು ಎಲ್ಲಾ ಸಮುದಾಯದ ನಾಯಕರಿಗೆ ಶಿಕ್ಷಕರಿಗೆ ಪೆÇೀಷಕರಿಗೆ ಮಕ್ಕಳಿಗೆ ಮನವಿ ಮಾಡುತ್ತೇನೆ. ಎಲ್ಲರೂ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸಹಕರಿಸಬೇಕು. ಎಲ್ಲಾ ಪರೀಕ್ಷೆಗಳಿಗೂ ಭಾಗವಹಿಸಬೇಕು. ಶಿಕ್ಷಣ ಬಹಳ ಮುಖ್ಯ. ಕಾನೂನು ಸುವ್ಯವಸ್ಥೆಗೆ ನಿಯೋಜನೆ ಮಾಡಿದ್ದೇವೆ. ಹೈಕೋರ್ಟ್ ತೀರ್ಪನ್ನ ಎಲ್ಲರೂ ಪಾಲಿಸಬೇಕು ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ