ಡಿಸೆಂಬರ್ ತಿಂಗಳಲ್ಲಿ 12 ದಿನ ಬ್ಯಾಂಕ್‌ಗಳಿಗೆ ರಜೆ: ಯಾವಾಗೆಲ್ಲ ನೋಡಿ

ಡಿಸೆಂಬರ್ ತಿಂಗಳಲ್ಲಿ 12 ದಿನ ಬ್ಯಾಂಕ್‌ಗಳಿಗೆ ರಜೆ: ಯಾವಾಗೆಲ್ಲ ನೋಡಿ

ಈ ತಿಂಗಳು ಒಟ್ಟು 12 ದಿನಗಳು ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ಕೆಲವೊಂದು ರಜೆಗಳು ದೇಶದಾದ್ಯಂತ ಎಲ್ಲಾ ಬ್ಯಾಂಕ್ ಗಳಿಗೆ ಅನ್ವಯಿಸಿದರೆ, ಇನ್ನೂ ಕೆಲವು ರಜೆಗಳು ಆಯಾ ರಾಜ್ಯ ಪ್ರದೇಶಗಳ ವಿಶೇಷ ಸಂದರ್ಭಗಳನ್ನು ಅನ್ವಯಿಸಿ ಇದೆ. ಒಟ್ಟು 12 ದಿನಗಳ ರಜೆಯಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರ ಹಾಗೂ ಭಾನುವಾರದ ರಜಾ ದಿನಗಳು ಸೇರಿವೆ. ಈ ಬಗ್ಗೆ ಗ್ರಾಹಕರಿಗೆ ಗೊಂದಲವಾಗದಂತೆ, ಆರ್ ಬಿ ಐ ರಜಾ ದಿನಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಡಿಸೆಂಬರ್ ತಿಂಗಳಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ: ಡಿಸೆಂಬರ್ 3: ಫೀಸ್ಟ್ ಆಫ್ ಸೇಂಟ್ ಫ್ರಾನ್ಸಿಸ್ ಗ್ರೇವಿಯರ್, ಡಿಸೆಂಬರ್ 18: ಯು ಸೋಸೋ ಥಾಮ್ ಡೆತ್ ಆನಿವರ್ಸರಿ,ಡಿಸೆಂಬರ್ 24 : ಕ್ರಿಸ್‌ಮಸ್ ಈವ್, ಡಿಸೆಂಬರ್ 25 : ಕ್ರಿಸ್‌ಮಸ್, ಡಿಸೆಂಬರ್ 27: ಕ್ರಿಸ್‌ಮಸ್ ಸೆಲೆಬ್ರೇಷನ್, ಡಿಸೆಂಬರ್ 30: ಯು ಕಿಯಾಂಗ್ ನಾಂಗ್‌ಬಹ್,ಡಿಸೆಂಬರ್ 31: ನ್ಯೂ ಇಯರ್ ಈವ್ ಕ್ರಿಸ್‌ಮಸ್‌ಗೆ ದೇಶಾದ್ಯಂತ ಬ್ಯಾಂಕ್ ರಜೆ ಇರುತ್ತದೆ.

ಡಿಸೆಂಬರ್ 5-ಭಾನುವಾರ, ಡಿಸೆಂಬರ್ 11 ಎರಡನೇ ಶನಿವಾರ, ಡಿಸೆಂಬರ್ 12 ಭಾನುವಾರ, ಡಿಸೆಂಬರ್ 19 ಭಾನುವಾರ, ಡಿಸೆಂಬರ್ 25 ನಾಲ್ಕನೇ ಶನಿವಾರ ಮತ್ತು ಕ್ರಿಸ್‌ಮಸ್, ಡಿಸೆಂಬರ್ 26 ಭಾನುವಾರ.