ಅತೀ ಕಡಿಮೆ ಬೆಲೆಗೆ ಜಿಯೋ ಸ್ಮಾರ್ಟ್‌ಫೋನ್

Jio smartphone at very low price

ಅತೀ ಕಡಿಮೆ ಬೆಲೆಗೆ ಜಿಯೋ ಸ್ಮಾರ್ಟ್‌ಫೋನ್

ಅತೀ ಕಡಿಮೆ ಬೆಲೆಗೆ ಅತ್ಯುತ್ತಮ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಜಿಯೋ ಕಂಪೆನಿ ಮುಂದಾಗಿದೆ. ಅದರಂತೆ ಇದೀಗ

ಅದರ ಮೊದಲ ಆವೃತ್ತಿ ಜಿಯೋ ಫೋನ್ ನೆಕ್ಸ್ ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಅದರಂತೆ ಮುಂದಿನ ತಿಂಗಳಲು ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಜಿಯೋ ಸಂಚಲನ ಸೃಷ್ಟಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಪ್ರಸ್ತುತ ಮಾಹಿತಿಯಂತೆ ಜನಪ್ರಿಯ ಜಿಯೋಫೋನ್ ನೆಕ್ಸ್ ಸೆಪ್ಟೆಂಬರ್ 10 ರಂದು ಬಿಡುಗಡೆ ಆಗಲಿದ್ದು, ಪ್ರೀ ಬುಕ್ಕಿಂಗ್ ಅವಕಾಶ ನೀಡುವ ಸಾಧ್ಯತೆಯಿದೆ.

ಜಿಯೋ ಈ ಸ್ಮಾರ್ಟ್‌ಫೋನ್‌ನ ಯಾವುದೇ ವಿಶೇಷತೆಗಳನ್ನು ಇನ್ನೂ ಕೂಡ ಬಹಿರಂಗಪಡಿಸಿಲ್ಲ. ಇದಾಗ್ಯೂ ಒಂದಷ್ಟು ಮಾಹಿತಿಗಳು ಲೀಕ್ ಆಗಿದೆ.ಸೋರಿಕೆಯಾದ ಮಾಹಿತಿ ಪ್ರಕಾರ ಜಿಯೋಫೋನ್ ನೆಕ್ಸ್ 2 ಜಿಬಿ ಮತ್ತು 3 ಜಿಬಿ RAM ರೂಪಾಂತರಗಳಲ್ಲಿ ಲಭ್ಯವಿರಲಿದೆ. ಹಾಗೆಯೇ ಇದರಲ್ಲಿ ಇದರಲ್ಲಿ 16 ಜಿಬಿ ಮತ್ತು 32 ಜಿಬಿ ಇನ್‌ಬಿಲ್ಟ್ ಸ್ಟೋರೇಜ್ ಆಯ್ಕೆಗಳಿರಲಿದೆ ಎಂದು ತಿಳಿದು ಬಂದಿದೆ.

ಇದಲ್ಲದೇ, ಜಿಯೋಫೋನ್ ನೆಕ್ಸ್ 5.5-ಇಂಚಿನ ಡಿಸ್ಸೇ ಮತ್ತು 2500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರುವ ಸಾಧ್ಯತೆಯಿದೆ. ಇನ್ನು ಇದರಲ್ಲಿ 13 ಮೆಗಾಪಿಕ್ಸೆಲ್ ಮತ್ತು 8 ಮೆಗಾಪಿಕ್ಸೆಲ್‌ನ ಎರಡು ಕ್ಯಾಮೆರಾಗಳನ್ನು ನೀಡಲಾಗುತ್ತದೆ ಎಂದು ಹೇಳಲಾಗಿದೆ.