ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಕಂದಮ್ಮ ಚಿಕಿತ್ಸೆಗೆ ಬೇಕು 16 ಕೋಟಿ ನೆರವಿಗಾಗಿ ಮೊರೆ

ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಕಂದಮ್ಮ ಚಿಕಿತ್ಸೆಗೆ ಬೇಕು 16 ಕೋಟಿ  ನೆರವಿಗಾಗಿ ಮೊರೆ

ಬೆಳಗಾವಿ ನಗರದ ಶಹಾಪುರ ನಗರದ ನಿವಾಸಿ ಮಂಗೇಶ್ ಬಾಳೆಕುಂದ್ರಿ ಅವರ ಮಗು ಸರ್ವಂಗೆ ಈಗ ಕೇವಲ ವಯಸ್ಸು ಒಂದು ವರ್ಷದ ನಾಲ್ಕು ತಿಂಗಳು ಈ ಮಗುವಿಗೆ ಬೆನ್ನುಮೂಳೆಯ ಸ್ನಾಯು ಕ್ಷೀಣತೆಯ (ಎಸ್.ಎ.ಎಂ-1) ಅಪರೂಪದ ಕಾಯಿಲೆಯಾಗಿದೆ. ಇದರಿಂದ ಚೇತರಿಸಿಕೊಳ್ಳಲು, ಬರುವ ಆರು ತಿಂಗಳಲ್ಲಿ ಜೋಲೊನ್ಸಾ ಎಂದ ಇಂಜೆಕ್ಷನ್ ಅನ್ನು ನೀಡುವ ಅವಶ್ಯಕತೆ ಇದೆ. ಇದರ ಬೆಲೆ ಬರೋಬ್ಬರಿ 16 ಕೋಟಿ ರೂ.ಗಳು.ಹೀಗಾಗಿ ಈ ವೆಚ್ಚವನ್ನು ಭರಿಸಲು ಮಗುವಿನ ಮನೆಯವರು ಸಾರ್ವಜನಿಕರ ಮೊರೆ ಹೋಗಿದ್ದು, ನೆರವಿಗಾಗಿ ಮನವಿ ಮಾಡಿದ್ದಾರೆ. ನಿಮ್ಮಚಿಕ್ಕಸಹಾಯವು ಮಗುವಿನ ಜೀವವನ್ನು ಉಳಿಸಬಹುದು.ದಯವಿಟ್ಟು ಈ ಸಂದೇಶವನ್ನು ಹಂಚಿಕೊಳ್ಳಿ. ದಯವಿಟ್ಟು ಸಹಾಯ ಮಾಡಿ ಎಂದು ಅಮಾಯಕ ಮಗುವಿನ ಪಾಲಕರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಸಹಾಯ ಮಾಡಲು ಇಚ್ಛಿಸುವವರು ಖಾತೆ ಸಂಖ್ಯೆ: 50100455282652

IFSC es: HDFC0009529
ಹೆಚ್.ಡಿ.ಎಫ್.ಸಿ ಬ್ಯಾಂಕ್ ಶಹಾಪುರ,ಶಾಖೆ, ಬೆಳಗಾವಿಗೆ ಹಣ ಜಮಾ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಮೋ: 78997 75977 ಈ ಸಂಖ್ಯೆಯನ್ನು ಸಂಪರ್ಕಿಸಬಹುದು.