ಆತಂಕ ಸೃಷ್ಟಿಸಿದ ಹೊಸ ಕೋವಿಡ್ ವೈರಸ್ : ಇದು ಲಸಿಕೆಗೂ ಜಗ್ಗಲ್ಲ!

ಆತಂಕ ಸೃಷ್ಟಿಸಿದ ಹೊಸ ಕೋವಿಡ್ ವೈರಸ್ : ಇದು ಲಸಿಕೆಗೂ ಜಗ್ಗಲ್ಲ!

ಹೋಸ ಕೋವಿಡ್ ರೂಪಾಂತರಿ ವೈರಸ್ ಮ್ಯು ಅಥವಾ ಬಿ.1.621 ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಇದು ಲಸಿಕೆ ನಿರೋಧಕ ಅಂದರೆ, ಲಸಿಕೆಗೂ ಬಗ್ಗದ ಶಕ್ತಿಯನ್ನು ಹೊಂದಿರುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಜನವರಿ 2021 ರಲ್ಲಿ ಕೊಲಂಬಿಯಾದಲ್ಲಿ ಈ ಹೊಸ ತಳಿಯ ವೈರಸ್ ಪತ್ತೆಯಾಗಿತ್ತು. ಬಳಿಕ ಇದು, ದಕ್ಷಿಣ ಅಮೆರಿಕ ಹಾಗೂ ಯುರೋಪ್ ನಲ್ಲಿ ಕಾಣಿಸಿಕೊಂಡಿದೆ.ಅಮೆರಿಕ, ಬ್ರಿಟನ್, ಯುಎಸ್, ಹಾಂಕ್ ಕಾಂಗ್‌ಗಳಲ್ಲಿಯೂ ಈ ರೂಪಾಂತರಿ ವೈರಸ್ ಪತ್ತೆಯಾಗಿದೆ.