ಕುಂದಾನಗರಿಯಲ್ಲಿ ಮಳೆರಾಯನ ನರ್ತನ : ರಸ್ತೆಗಳೆಲ್ಲಾ ಕೆರೆಗಳು.!

ಕುಂದಾನಗರಿಯಲ್ಲಿ ಮಳೆರಾಯನ ನರ್ತನ : ರಸ್ತೆಗಳೆಲ್ಲಾ ಕೆರೆಗಳು.!

ಬೆಳಗಾವಿಯಲ್ಲಿ ಇಂದು ಮಳೆರಾಯನ ಅಬ್ಬರ ಜೋರಾಗಿದೆ. ಪರಿಣಾಮ ರಸ್ತೆಗಳು ಕೆರೆಗಳಂತಾಗಿದ್ದು, ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ. ಬೆಳಗಾವಿಯ ಹನುಮಾನ ನಗರದ ರಸ್ತೆಯಲ್ಲಿ ನೀರು ನಿಂತಿದ್ದು,ಕೆರೆಯಂತಹ ವಾತಾವರಣ ನಿರ್ಮಾಣವಾಗಿದೆ. ಗುಡುಗು ಸಿಡಿಲಿನಿಂದ ಕೂಡಿದ ಮಳೆ ಕುಂದಾನಗರಿಯಲ್ಲಿ ಅವಾಂತರಗಳ ಸಾಲುಗಳನ್ನು ಹುಟ್ಟಿ ಹಾಕುತ್ತಿದೆ. ಸಂಜೆಯಾಗುತ್ತಿದ್ದಂತೆ ಮಳೆರಾಯನ ಕಾಟ ಶುರುವಾಗುತ್ತಿದ್ದು, ದಿನವೂ ಸಂಜೆ ಏನು ತಪ್ಪಿದರೂ ಮಳೆ ತಪ್ಪಲ್ಲ ಎಂಬಂತಾಗಿದೆ ಗಡಿನಾಡಿನ ಜನರಿಗೆ