ಸಂತೋಷ ಆತ್ಮಹತ್ಯೆ ಪ್ರಕರಣದಲ್ಲಿ ರಮೇಶ ಜಾರಕಿಹೊಳಿ ಹೊಸ ಬಾಂಬ್: ಇದು ಅದೇ ಟೀಮ್

ರಮೇಶ ಜಾರಕಿಹೊಳಿ‌ ಅವರನ್ನು ಷಡ್ಯಂತರಕ್ಕೆ ಪ್ಲ್ಯಾನ್ ಮಾಡಿದ್ದ ತಂಡವೇ ಈಶ್ವರಪ್ಪ ಅವರನ್ನು ಖೆಡ್ಡಾಗೆ ಕೆಡವಿದೆ. ಯಾವುದೇ ಕಾರಣಕ್ಕೂ ಸಚಿವ ಈಶ್ವರಪ್ಪ ರಾಜೀನಾಮೆ ಕೊಡಬಾರದು ಎಂದು ಶಾಸಕ ರಮೇಶ ಜಾರಕಿಹೊಳಿ‌ ಪ್ರತಿಕ್ರಿಯೆ ನೀಡಿದ್ದಾರೆ. ಗುತ್ತಿಗೆದಾರ ಸಂತೋಷ ಪಾಟೀಲ್ ಸಾವಿನ ಬಗ್ಗೆ ಮಾದ್ಯಮಗಳ ಜೊತೆಗೆ ಮಾತನಾಡಿದ ಅವರು, ಇದು ನನ್ನ ಮೇಲೆ ಷಡ್ಯಂತರ ಮಾಡಿದ ಮಹಾನಾಯಕರದ್ದೇ ಕೆಲಸ. ಈ ಬಗ್ಗೆ ಸಿಬಿಐ ತನಿಖೆ ಆಗಲಿ, ನನ್ನ ಕೇಸ್ ಕೂಡ ಆಗಲಿ, ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ನಾನು ಎಲ್ಲಕ್ಕೂ ಉತ್ತರ ಕೊಡುತ್ತೇನೆ. ತನಿಖೆ ಆಗಲಿ ಅಕಸ್ಮಾತ್ ಈಶ್ವರಪ್ಪ ತಪ್ಪಿದ್ದರೆ, ಗಲ್ಲು ಶಿಕ್ಷೆ ಆಗಲಿ ಎಂದರು.