ಸೊಸೆಗೆ ಚಿಕನ್ ರಕ್ತ ಕುಡಿಸಿ ಮಾವನಿಂದ ವಿಕೃತಿ

ಸೊಸೆಗೆ ಚಿಕನ್ ರಕ್ತ ಕುಡಿಸಿ ಮಾವನಿಂದ ವಿಕೃತಿ

ಮಹಿಳೆಯೊಬ್ಬಳಿಗೆ ಲೈಂಗಿಕ, ಮಾನಸಿಕ ಹಿಂಸೆ ನೀಡಿದಲ್ಲದೆ, ಚಿಕನ್ ರಕ್ತ ಕುಡಿಸಿ ವಿಕೃತಿ ಮೆರೆದ ಆಕೆಯ ಗಂಡ ಮತ್ತು ಮಾವನನ್ನು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಪುಣೆ ಬಳಿಯ ಭೂಸಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ."ನನ್ನ ಗಂಡ ನಂಪುಸಕನಾಗಿದ್ದು, ಮದುವೆ ಈ ವಿಷಯ ಮುಚ್ಚಿಟ್ಟಿದ್ದರು.ಮಾವ ನನಗೆ ಮಕ್ಕಳಾಗುವುದಿಲ್ಲ ಎಂದು ಊರಿಡಿ ಹೇಳಿಕೊಂಡು ಬರುತ್ತಿದ್ದರು. ಈ ಬಗ್ಗೆ ನಿಜ ವಿಷಯವನ್ನು ನಾನು ಸಂಬಂಧಿಕರಿಗೆ ಹೇಳಿದ್ದೆ. ಆ ಬಳಿಕ ಗಂಡ ಮತ್ತು ಮಾವ ನನಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾರೆ. ಯಾವುದೋ ಸ್ವಾಮೀಜಿಯ ಮಾತು ಕೇಳಿಕೊಂಡು ನನಗೆ ಚಿತ್ರ ಹಿಂಸೆ ನೀಡಿ, ಚಿಕನ್ ರಕ್ತ ಕುಡಿಸಿದ್ದಾರೆ' ಎಂದು 34 ವರ್ಷದ ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾಳೆ. ದೂರು ಸ್ವೀಕರಿಸಿದ ಭೂಸಾರ್ ಪೊಲೀಸರು ಮಹಿಳೆಯ ಪತಿ ಮತ್ತು ಮಾವನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.