ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆ..!

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆ..!

ಅಫ್ಘಾನಿಸ್ತಾನವನ್ನು ತಮ್ಮಕೈವಶ ಮಾಡಿಕೊಂಡು ಅಟ್ಟಹಾಸ ಮೆರೆಯುತ್ತಿರುವ ತಾಲಿಬಾನ್ ಉಗ್ರರು, ನಾಳೆ (ಶುಕ್ರವಾರ) ಅಧಿಕೃತವಾಗಿ ಸರ್ಕಾರ ರಚಿಸಲಿದ್ದಾರೆ ಎಂದು ತಿಳಿದು ಬಂದಿದೆ. ಕಾಬೂಲ್ ಅನ್ನು ವಶಪಡಿಸಿಕೊಂಡ ಬಳಿಕ ಸುದ್ದಿಗೋಷ್ಠಿ ನಡೆಸಿದ್ದ ತಾಲಿಬಾನ್ ನಾಯಕರು, ಶೀಘ್ರದಲ್ಲಿ ಸರ್ಕಾರ ರಚಿಸುವುದಾಗಿ ತಿಳಿಸಿದ್ದರು. ಅದರಂತೆ, ನಾಳೆ ಶುಕ್ರವಾರದ ಪ್ರಾರ್ಥನೆ ಬಳಿಕ ಸರ್ಕಾರ ರಚಿಸಲಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಅಫ್ಘಾನಿಸ್ತಾನದಲ್ಲಿ 20 ವರ್ಷದ ಹಿಂದೆ ತಾಲಿಬಾನ್ ಆಡಳಿತ ನಡೆಸಿತ್ತು. ಆ ಬಳಿಕ ಇದೀಗ ಮತ್ತೊಮ್ಮೆ ದೇಶವನ್ನು ವಶಪಡಿಸಿಕೊಂಡಿದೆ. ಈ ಬಾರಿ ನಾವು ಬದಲಾಗಿದ್ದೇವೆ. ಹೆಣ್ಣು ಮಕ್ಕಳ ಶಿಕ್ಷಣ, ಉದ್ಯೋಗಕ್ಕೆ ಅವಕಾಶ ನೀಡುವುದು ಸೇರಿದಂತೆ ನಿಯಮಗಳಲ್ಲಿ ಬದಲಾವಣೆ ತಂದು ಸರ್ಕಾರ ರಚಿಸುತ್ತೇವೆ ಎಂದು ತಾಲಿಬಾನ್ ನಾಯಕರು ಹೇಳುತ್ತಿದ್ದಾರೆ. ಮತ್ತೊಂದೆಡೆ ಅಮಾಯಕರನ್ನು ಶೂಟ್ ಮಾಡಿ ಕೊಲ್ಲುತ್ತಾ ವಿಕೃತಿ ಮೆರೆಯುತ್ತಿದ್ದಾರೆ. ಈ ಬಾರಿ ಮತ್ತೆ ಉಗ್ರರು ಸರ್ಕಾರ ರಚಿಸಿದರೆ, ಯಾವ ರೀತಿಯ ಆಡಳಿತ ನೀಡುತ್ತಾರೆ ಎಂಬುವುದನ್ನು ಕಾದು ನೋಡಬೇಕಿದೆ.