ಹಿಜಾಬ್ ಕುರಿತು ನ್ಯಾಯಾಲಯದಿಂದ ಐತಿಹಾಸಿಕ ತೀರ್ಪು ಎಲ್ಲರೂ ಪಾಲಿಸುವ ವಿಶ್ವಾಸವಿದೆ ಎಂದ ಸಚಿವ ಬಿ.ಸಿ ನಾಗೇಶ್

ಹಿಜಾಬ್ ಕುರಿತು ನ್ಯಾಯಾಲಯದಿಂದ ಐತಿಹಾಸಿಕ ತೀರ್ಪು  ಎಲ್ಲರೂ ಪಾಲಿಸುವ ವಿಶ್ವಾಸವಿದೆ ಎಂದ ಸಚಿವ ಬಿ.ಸಿ ನಾಗೇಶ್

ಹಿಜಾಬ್ ಕುರಿತಂತೆ ನ್ಯಾಯಾಲಯವು ನೀಡಿದ ತೀರ್ಪು ಐತಿಹಾಸಿಕವಾದುದು. ಕರ್ನಾಟಕದ ಜನತೆ ನ್ಯಾಯಾಲಯದ ಆದೇವನ್ನು ಪಾಲಿಸುತ್ತಾರೆಂದು ವಿಶ್ವಾಸವಿದೆ. ಮುಂಬರುವ ದಿನಗಳಲ್ಲಿ ಎಲ್ಲರೂ ಕೂಡ ನ್ಯಾಯಾಲಯದ ಈ ಆದೇಶವನ್ನು ಪಾಲಿಸುತ್ತಾರೆಂದು ವಿಶ್ವಾಸವಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.ಇಂದು ಮಂಗಳವಾರ ರಾಜ್ಯ ಹೈಕೋರ್ಟ್ ಕಾಲೇಜುಗಳಲ್ಲಿ ಹಿಜಾಬ್‍ನ್ನು ಧರಿಸುವಂತಿಲ್ಲ. ಕೇವಲ ಆಯಾ ಶಾಲೆಯ ಸಮವಸ್ರ್ತವನ್ನು ಮಾತ್ರ ಧರಿಸಬೇಕೆಂಬ ಐತಿಹಾಸಿಕ ನಿರ್ಧಾರವನ್ನು ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್‍ರವರು, ಈ ಹಿಂದಿನಿಂದಲೂ ಪದೇ ಪದೇ ಅದನ್ನೇ ನಾನು ಹೇಳುತ್ತಿದ್ದೇನೆ. ನ್ಯಾಯಾಲಯದ ಆದೇಶ ಏನೇ ಇದ್ದರೂ ನಾನು ಸ್ವಾಗತಿಸುತ್ತೇನೆಂದು ಹೇಳಿದ್ದೆ. ಈ ಹಿಂದೆ ಕೂಡ ನ್ಯಾಯಾಲಯದ ಆದೆಶಕ್ಕೆ ಗೌರವ ನೀಡಿ ತೀರ್ಪನ್ನು ಸ್ವಾಗತಿಸಿದ್ದು ಗೊತ್ತಿದೆ. ಅದೇ ರೀತಿ ನ್ಯಾಯಾಲಯದ ಈ ತೀರ್ಪನ್ನೂ ಕೂಡ ಸ್ವೀಕಾರ ಮಾಡಿದ್ದೇವೆ. ಇದೊಂದು ನ್ಯಾಯಾಲಯದ ಐತಿಹಾಸಿಕ ನಿರ್ಧಾರವಾಗಿದೆ.ಶಿಕ್ಷಣ ವ್ಯವಸ್ಥೆಯಲ್ಲಿದ್ದ ಹಲವಾರು ಗೊಂದಲಗಳಿದ್ದು ಈ ತೀರ್ಪಿನ ಆಧಾರದ ಮೇಲೆ ನಾವು ನಿವಾರಿಸುವ ಕ್ರಮ ಕೈಗೊಳ್ಳುತ್ತೇವೆ. ಸಮವಸ್ತ್ರ ಎಂಬುದು ವಿಶ್ವ ಮಾನಸಿಕೆತೆಯನ್ನು ತರುವ ನಿಟ್ಟಿನಲ್ಲಿ ಸಹಕಾರಿಯಾಗಿದೆ. ಯೂನಿಫಾರ್ಮ ಸಾಕಾರವಾಗಲಿ ಎನ್ನುವವರು ನಾವೆಲ್ಲ ಈ ದೇಶದ ಮಕ್ಕಳೆ. ನಾವೆಲ್ಲ ಈ ದೇಶದ ಪ್ರಜೆಗಳು ಎನ್ನುವ ಮಾನಸಿಕತೆಯನ್ನು ತರುವ ನಿಟ್ಟಿನಲ್ಲಿ ನಾವೆಲ್ಲ ಕಾರ್ಯವನ್ನು ಮಾಡಿತ್ತೇವೆ.ಯಾವೆಲ್ಲ ಹೆಣ್ಣು ಮಕ್ಕಳಿಗೆ ಹಿಜಾಬ್ ಕುರಿತಂತೆ ಮಿಸ್ ಗೈಡ್ ಮಾಡಲಾಗಿತ್ತೋ ಅವರ ಮನಸ್ಸುಗೆಲ್ಲುವ ಕೆಲಸ ಮಾಡುತ್ತೇವೆ. ಇನ್ನು ಅವರನ್ನೂ ಕೂಡ ಶಿಕ್ಷಣದ ಮುಖ್ಯವಾಹಿನಿಗೆ ತರುವ ಕೆಲಸ ಮಾಡುತ್ತೇವೆ. ಅವರೆಲ್ಲರೂ ಕೂಡ ನಾಳೆ ಶಾಲೆಗೆ ಬಂದು ವಿದ್ಯಾಭ್ಯಾಸವನ್ನು ಮುಂದುವರೆಸುತ್ತಾರೆಂದು ವಿಶ್ವಾಸವಿದೆ. ಕರ್ನಾಟಕದ ಜನತೆ ಯಾವಾಗಲೂ ಕೋರ್ಟ್ ತೀರ್ಪಿನ ವಿರುದ್ಧವಾಗಿ ಮಾತನಾಡಿದಂಥವರಲ್ಲ. ಆದರೆ ಕೆಲ ಹೆಣ್ಣುಮಕ್ಕಳು ನ್ಯಾಯಾ¯ಯದ ಮಧ್ಯಂತರ ಆದೇಶ ಪಾಲಿಸುವಲ್ಲಿ ಮಿಸ್‍ಗೈಡ್ ಆಗಿದ್ದರು. ಮುಂದಿನ ದಿನಗಳಲ್ಲಿ ಅವರೂ ಕೂಡ ಸರಿಹೋಗುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.ಈ ವೇಳೆ ನ್ಯಾಯಾಲಯದ ಈ ಆದೇಶ ಎಲ್ಲೆಡೆ ಪಾಲನೆಯಾಗುತ್ತಾ ಎಂಬ ಮಾಧ್ಯಮದವರ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ರಾಜ್ಯದಲ್ಲಿ ಸುಮಾರು 86ಸಾವಿರ ವಿದ್ಯಾರ್ಥಿನಿಯರು ನಮ್ಮ ಪಿಯು ಯುನಿವರ್ಸಿಟಿಯಲ್ಲಿ ಓದುತ್ತಿದ್ದಾರೆ. ಅದರಲ್ಲಿ ಕೇವಲ 6ಮಕ್ಕಳು ಮಾತ್ರ ಇದು ನಮ್ಮ ಧಾರ್ಮಿಕ ಹಕ್ಕು ಎಂದು ಇತ್ತೀಚೆಗೆ ಹೇಳಿದ್ದುಂಟು. ಯಾರೋ ನಾಲ್ಕು ಜನ ಮಧ್ಯಂತರ ಆದೇಶ ಪಲಿಸಲ್ಲ ಎಂದ ಮಾತ್ರಕ್ಕೆ ಎಲ್ಲರೂ ಪಾಲಿಸಲ್ಲಾ ಎಂದು ಅರ್ಥವಲ್ಲ. ಮೊನ್ನೆ ನಡೆದ ಎಕ್ಸಾಂನಲ್ಲಿ ಶೇ99ರಷ್ಟು ಮಕ್ಕಳು ಸಮವಸ್ತ್ರವನ್ನು ಧರಿಸಿ ಕಾಲೇಜಿಗೆ ಬಂದು ಎಕ್ಸಾಂ ಬರೆದಿದ್ದಾರೆ ಮುಂಬರುವ ದಿನಗಳಲ್ಲಿ ಎಲ್ಲರೂ ಅದನ್ನು ಫಾಲೋ ಮಾಡುತ್ತಾರೆ ಎಂದು ವಿಶ್ವಾಸವಿದ ಎಂದರು