ಬಹುಕಾಲದ ಕನಸು ನನಸಾಗಿಸಿದ ಚಿನ್ನದ ಹುಡುಗ

ಬಹುಕಾಲದ ಕನಸು ನನಸಾಗಿಸಿದ ಚಿನ್ನದ ಹುಡುಗ

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದು ಮನೆಮಾತಾಗಿರುವ ನೀರಜ್ ಚೋಪ್ರಾ ತಮ್ಮ ಪೋಷಕರ ಬಹು ಕಾಲದ ಕನಸನ್ನು ನನಸು ಮಾಡಿದ್ದಾರೆ. ನೀರಜ್ ಚೋಪ್ರಾ ತಂದೆ ತಾಯಿಗೆ ವಿಮಾನದಲ್ಲಿ ಪ್ರಯಾಣಿಸಬೇಕೆಂಬ ಕನಸಿತ್ತು. ಇದೀಗ ಮಗ ಪೋಷಕರ ಕನಸನ್ನು ಇಂದು ಈಡೇರಿಸಿದ್ದಾರೆ. ತಂದೆ-ತಾಯಿಯ ಆಸೆಯೊಂದನ್ನು ಇಂದು ತೀರಿಸಿ ಸಂತೋಷವಾಗಿದೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.ಜೊತೆಗೆ ಪೋಷಕರೊಂದಿಗೆ ವಿಮಾನದಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.