ಚರಂಡಿಯಂತಾದ ನೆಹರು ನಗರದ ಪ್ರಮುಖ ರಸ್ತೆ

ಚರಂಡಿಯಂತಾದ ನೆಹರು ನಗರದ ಪ್ರಮುಖ ರಸ್ತೆ

ಚರಂಡಿಯಂತಾದ ನೆಹರು ನಗರದ ಪ್ರಮುಖ ರಸ್ತೆ

ಕಳೆದ ಕೆಲವು ದಿನಗಳಿಂದ ಬೆಳಗಾವಿಯ ನೆಹರು ನಗರ ಬಸವಣ್ಣ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಆದರೆ ಮಹಾನಗರ ಪಾಲಿಕೆ ಈ ಸಮಸ್ಯೆಯನ್ನು ನಿರ್ಲಕ್ಷಿಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ರಸ್ತೆಯ ಪಕ್ಕದಲ್ಲಿರುವ ತರಕಾರಿ ಮಾರಾಟಗಾರರು ದುರ್ವಾಸನೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇನ್ನು ವಾಹನ ಸವಾರರಿಗೆ ಸಂಚರಿಸಲು ಕಷ್ಟವಾಗುತ್ತಿದೆ.ಶಾಸಕರು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಪ್ರಸಾದ್ ಚೌಗುಲೆ ಒತ್ತಾಯಿಸಿದ್ದಾರೆ.