ಖ್ಯಾತ ನಟನ ತಾಯಿ ನಿಧನ

ಖ್ಯಾತ ನಟನ ತಾಯಿ ನಿಧನ

ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ತಾಯಿ ಅರುಣಾ ಭಾಟಿಯಾ ಇಂದು (08) ಬೆಳಗ್ಗೆ ಮುಂಬೈನ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಈ ಕುರಿತು ಸ್ವತಃ ಅಕ್ಷಯ್ ಕುಮಾರ್ ಟ್ವಿಟರ್‌ನಲ್ಲಿ ದುಃಖ ವ್ಯಕ್ತಪಡಿಸಿದ್ದಾರೆ. "ಅವಳು ನನ್ನ ಮೂಲ.ನಾನು ತುಂಬಾ ಅಸಹನೀಯ ನೋವನ್ನು ಅನುಭವಿಸುತ್ತಿದ್ದೇನೆ. ನನ್ನ ಅಮ್ಮಇಂದು ಬೆಳಗ್ಗೆ ಜಗತ್ತನ್ನು ತೊರೆದಿದ್ದಾರೆ. ನನ್ನ ತಂದೆಯೊಂದಿಗೆ ಬೇರೆ ಜಗತ್ತಿನಲ್ಲಿ ಜೊತೆಯಾಗಿದ್ದಾರೆ' ಎಂದು ಅಕ್ಷಯ್ ಕುಮಾರ್ ಟ್ವಿಟ್ ಮಾಡಿದ್ದಾರೆ.ಮುಂಬೈನ ಹಿರಾನಂದನಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಅರುಣಾ ಭಾಟಿಯಾ ಚಿಕಿತ್ಸೆ ಪಡೆಯುತ್ತಿದ್ದರು. ಅರುಣಾ ಭಾಟಿಯಾ ನಿಧನಕ್ಕೆ ಇನ್ನೂ ಸ್ಪಷ್ಟವಾದ ಕಾರಣ ತಿಳಿದುಬಂದಿಲ್ಲ.