ಈ ಭಾಗದಲ್ಲಿ ಬೇಕಾಬಿಟ್ಟಿ ಬಿದ್ದಿದೆ ಕಸದ ರಾಶಿ : ಯಾಕಿಷ್ಟು ನಿರ್ಲಕ್ಷ್ಯ.!

ಈ ಭಾಗದಲ್ಲಿ ಬೇಕಾಬಿಟ್ಟಿ ಬಿದ್ದಿದೆ ಕಸದ ರಾಶಿ : ಯಾಕಿಷ್ಟು ನಿರ್ಲಕ್ಷ್ಯ.!

ಬೆಳಗಾವಿಯ ಶಾಹೂನಗರ ದಿಂದ ಕಂಗ್ರಾಳಿ ಬಿಕೆ ಗ್ರಾಮಕ್ಕೆ ಸಾಗುವ ರಸ್ತೆ ಪಕ್ಕದಲ್ಲಿ ಕಸದ ರಾಶಿ ಬೇಕಾಬಿಟ್ಟಿಯಾಗಿ ಬಿದ್ದಿದ್ದು, ಸುತ್ತ ಮುತ್ತಲಿನ ವಾತಾವರಣ ಸಂಪೂರ್ಣ ಗಬ್ಬೆದ್ದು ನಾರುತ್ತಿದೆ. ಬೇಕಾಬಿಟ್ಟಿ ಕಸ ಚೆಲ್ಲಿರೋದರಿಂದ ಸಾಂಕ್ರಾಮಿಕ ರೋಗಗಳ ಭೀತಿ ಕೂಡ ಹೆಚ್ಚಾಗಿದ್ದು, ಇತ್ತ ಗಮನ ಹರಿಸಬೇಕಾದ ಅಧಿಕಾರಿಗಳ ಜೊತೆ, ಸಾರ್ವಜನಿಕರು ಸಹ ನಿರ್ಲಕ್ಷ್ಯ ತೋರಿದ್ದಾರೆ. ಇದರಿಂದಾಗಿ ಸಂಪೂರ್ಣ ಪರಿಸರ ಹದಗೆಟ್ಟು ಹೋಗಿದ್ದು, ಜನ ನಾಯಕರು ಹಾಗೂ ಜನ ಸಾಮಾನ್ಯರು ಸಹ ಈ ಗಲೀಜಿನತ್ತ ಎಚ್ಚರಿಕೆ ವಹಿಸಬೇಕಿದೆ.