ಹಿರೇಬಾಗೇವಾಡಿ ಬಳಿ ಭೀಕರ ಅಪಘಾತ ಮೂವರ ಸಾವು

ಹಿರೇಬಾಗೇವಾಡಿ ಬಳಿ ಭೀಕರ ಅಪಘಾತ  ಮೂವರ ಸಾವು

ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ ಬಳಿ ಭೀಕರ ಅಪಘಾತ ಸಂಭವಿಸಿದ್ದು. ಲಾರಿಗೆ ಹಿಂಬದಿಯಿಂದ ಕಾರು ಗುದ್ದಿದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ.ಹಿರೇಬಾಗೇವಾಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಈ ಘಟನೆ ನಡೆದಿದ್ದು. ಯಲ್ಲಾಪುರದಿಂದ ಬೆಳಗಾವಿಗೆ ಹೊರಟ್ಟಿದ್ದ ಕಾರು ವೇಗವಾಗಿ ಲಾರಿಗೆ ಗುದ್ದಿದ ಪರಿಣಾಮ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಯಲ್ಲಾಪುರದ ನಿವಾಸಿ ವಾಸಿಂ ಖಾನ್ (40), ಸಯ್ಯದ್ ಇಸ್ಮಾಯಿಲ್ (65), ಸುಶೀಲಾ ಫನಾರ್ಂಡಿಸ್ (60) ಮೃತ ದುರ್ದೈವಿಗಳು. ಇಬ್ಬರಿಗೆ ಗಂಭೀರವಾಗಿ ಗಾಯವಾಗಿದ್ದು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಹಿರೇಬಾಗೇವಾಡಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ