ಮತಾಂತರ ನಿಷೇಧ ಕಾಯ್ದೆ ಜಾರಿಯಾದ್ರೆ 2023ಕ್ಕೆ ನಾವೇ ಅಧಿಕಾರಕ್ಕೆ ಬಂದು ಕಾಯ್ದೆ ತೆಗೆಯುತ್ತೇವೆ ಸಿದ್ದರಾಮಯ್ಯ

ಮತಾಂತರ ನಿಷೇಧ ಕಾಯ್ದೆ ಜಾರಿಯಾದ್ರೆ  2023ಕ್ಕೆ ನಾವೇ ಅಧಿಕಾರಕ್ಕೆ ಬಂದು ಕಾಯ್ದೆ ತೆಗೆಯುತ್ತೇವೆ  ಸಿದ್ದರಾಮಯ್ಯ

ಸದನದಲ್ಲಿ ಮತಾಂತರ ನಿಷೇಧ ಕಾಯ್ದೆ ವಿರುದ್ಧ ಗುಡುಗಿದ ಸಿದ್ದರಾಮಯ್ಯ: ಕಾಯ್ದೆ ಜಾರಿಯಾದ್ರೆ ಬೀದಿಗಿಳಿದು ಹೋರಾಡುತ್ತೇವೆ..!ಮತಾಂತರ ನಿಷೇಧ ಕಾಯ್ದೆ ಕಾಂಗ್ರೆಸ್ ಕೂಸಲ್ಲ. ಇದು ಆರ್‍ಎಸ್‍ಎಸ್ ಕೂಸು. ಯಾವುದೇ ಕಾರಣಕ್ಕೂ ಇದನ್ನು ಜಾರಿಗೆ ತರಲು ಬಿಡೋದಿಲ್ಲ. ಒಂದು ವೇಳೆ ತಂದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಬಗ್ಗೆ ಆಡಳಿತ-ವಿಪಕ್ಷ ನಾಯಕರ ಮಧ್ಯ ಮಾತಿನ ಸಮರಕ್ಕೆ ಸಾಕ್ಷಿಯಾಗಿದೆ. ಮತಾಂತರ ನಿಷೇಧ ಕಾಯ್ದೆ ವಿರುದ್ಧ ಮಾತನಾಡಿದ ಸಿದ್ದರಾಮಯ್ಯ ಇದು ಯಡಿಯೂರಪ್ಪ ಕಾಲದಲ್ಲಿ ಆಗಿದ್ದು. 2009ರಲ್ಲಿ ಬಿಎಸ್‍ವೈ ಸಿಎಂ ಆಗಿದ್ದಾಗಿನ ಕರಡು. ಮತಾಂತರ ಕರಡು ನಮ್ಮ ಕಾಲದಲ್ಲಿ ಆಗಿದ್ದಲ್ಲ. ಇದು ಕಾಂಗ್ರೆಸ್ ಕೂಸಲ್ಲ, ಆರ್‍ಎಸ್‍ಎಸ್ ಕೂಗು. ಒಂದು ವೇಳೆ ಕಾಯ್ದೆ ಜಾರಿಯಾದ್ರೆ ನಾವು ತೆಗೆದು ಹಾಕುತ್ತೇವೆ. 2023ಕ್ಕೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಎಚ್ಚರಿಸಿದರು.ನಮಗೆ ಆಸಕ್ತಿ ಇದ್ದಿದ್ದರೆ ನಮ್ಮ ಸರ್ಕಾರದಲ್ಲಿಯೇ ಜಾರಿಗೆ ತರುತ್ತಿದ್ದೇವು. ಇದರಲ್ಲಿ ಆರ್‍ಎಸ್‍ಎಸ್ ಕೈವಾಡವಿದೆ. ಇದು ಆರ್‍ಎಸ್‍ಎಸ್ ಅಜೆಂಡಾ. ಜೆಡಿಎಸ್‍ನವರು ಏನು ಮಾತನಾಡುತ್ತಾರೆ ನಮಗೆ ಗೊತ್ತಿಲ್ಲ. ನಾವಂತೂ ಬೆಂಬಲ ಕೊಡೋದಿಲ್ಲ ಎಂದರು