ಬೆಳಗಾವಿ: ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕರಡು ಮತದಾರರ ಪಟ್ಟಿಯನ್ನು ಸೋಮವಾರ ಅಧಿಕೃತವಾಗಿ ಪ್ರಕಟಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಮೊಹಮ್ಮದ್ ರೋಷನ್ ಅವರು ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಣದಲ್ಲಿ ಸೋಮವಾರ(ಆ.24) ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕರಡು ಮತದಾರರ ಪಟ್ಟಿ ಕುರಿತು ಜರುಗಿದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ಎಲ್ಲಾ ತಹಶೀಲ್ದಾರ್ ಕಚೇರಿಗಳು, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಈ ಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ ತಿಳಿಸಿದರು.

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ

ಮತದಾರರ ಪಟ್ಟಿ ಪರಿಷ್ಕರಣೆಯ ನಂತರ ಕರಡು ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ ಒಟ್ಟು 41,07,000 ಮತದಾರರ ಪೈಕಿ 35,93,561 ಮತದಾರರಿದ್ದು ಈ ಪೈಕಿ 18,05,685 ಪುರುಷ, 17,87,715 ಮಹಿಳಾ ಹಾಗೂ 161 ಇತರೆ ಮತದಾರರಿದ್ದು 5,13,439 ಗೈರು, ಸ್ಥಳಾಂತರ, ಮೃತ ಹಾಗೂ ಇತರೆ ಮತದಾರರಿರುತ್ತಾರೆ ಎಂದು ತಿಳಿಸಿದರು.

ಮತ ಕ್ಷೇತ್ರವಾರು ವಿವರ: ನಿಪ್ಪಾಣಿ-1,05,304 ಪುರುಷ 1,05,213 ಮಹಿಳಾ ಹಾಗೂ 8 ಇತರೆ ಒಟ್ಟು 2,10,525 ಮತದಾರರು, ಚಿಕ್ಕೋಡಿ-ಸದಲಾಗ: 1,05,967 ಪುರುಷ, 1,05,995 ಮಹಿಳಾ, 11 ಇತರೆ ಒಟ್ಟು 2,11,973, ಅಥಣಿ: 1,12,914 ಪುರುಷ, 1,10,082 ಮಹಿಳಾ, 6 ಇತರೆ ಒಟ್ಟು 2,23,002, ಕಾಗವಾಡ:95,492 ಪುರುಷ, 92,734 ಮಹಿಳಾ ಇತರೆ 6 ಒಟಟು 1,088,232, ಕುಡಚಿ:89,426 ಪುರುಷ, 85,794 ಮಹಿಳಾ, 11 ಇತರೆ ಒಟ್ಟು 1,75,231, ರಾಯಬಾಗÀ: 99,623 ಪುರುಷ, 95,550 ಮಹಿಳಾ, 10 ಇತರೆ ಒಟ್ಟು 1,95,183, ಹುಕ್ಕೇರಿ: 95,893 ಪುರುಷ, 96,753 ಮಹಿಳಾ, 8 ಇತರೆ ಒಟ್ಟು 1,92,654, ಅರಭಾವಿ:1,14,059 ಪುರುಷ, 1,13,103 ಮಹಿಳಾ, 8 ಇತರೆ ಒಟ್ಟು 2,27,170, ಗೋಕಾಕ:10,8,959 ಪುರುಷ, 1,12,237 ಮಹಿಳಾ, 17 ಇತರೆ ಒಟ್ಟು 2,21,213, ಯಮಕನಮರಡಿ:95,049 ಪುರುಷ, 96,866 ಮಹಿಳಾ, 8 ಇತರೆ ಒಟ್ಟು 1,91,923, ಬೆಳಗಾವಿ ಉತ್ತರ: 93,601 ಪುರುಷ, 98,755 ªಮಹಿಳಾ, 16 ಇತರೆ ಒಟ್ಟು 1,92,372, ಬೆಳಗಾವಿ ದಕ್ಷಿಣ: 96,113 ಪುರುಷ, 97,628 ಮಹಿಳಾ, 14 ಇತರೆ ಒಟ್ಟು 2,35,426, ಬೆಳಗಾವಿ ಗ್ರಾಮೀಣ: 1,18,303 ಪುರುಷ, 1,17,114 ಮಹಿಳಾ, ಇತರೆ 9 ಒಟ್ಟು 2,35,426, ಖಾನಾಪುರ: 1,01,866 ಪುರುಷ, 94,879 ಮಹಿಳಾ, 4 ಇತರೆ ಒಟ್ಟು 1,96,749, ಕಿತ್ತೂರ: 92,216 ಪುರುಷ, 90,071 ಮಹಿಳಾ, 8 ಇತರೆ, ಒಟ್ಟು 1,82,2295, ಬೈಲಹೊಂಗಲ್:89,933 ಪುರುಷ, 88,965 ಮಹಿಳಾ, 2 ಇತರೆ ಒಟ್ಟು 1,78,900, ಸವದತ್ತಿ ಯಲ್ಲಮ್ಮ:94,869 ಪುರುಷ, 93,767 ಮಹಿಳಾ, 5 ಇತರೆ ಒಟ್ಟು 1,88,641, ರಾಮಗದುರ್ಗ: 96,098 ಪುರುಷ, 92,209 ಮಹಿಳಾ, ಇತರೆ 10 ಒಟ್ಟು 1,88,317 ಮತದಾರರಿರುತ್ತಾರೆ.

ಕರಡು ಪಟ್ಟಿಯಲ್ಲಿ ಹೆಸರಿಲ್ಲದ ಅರ್ಹ ಮತದಾರರು ನಮೂನೆ-6 ರ ಮೂಲಕ ಮತದಾರರ ನೋಂದಣಾಧಿಕಾರಿಗಳು, ಬಿಎಲ್‌ಒ ಅಥವಾ ವೋಟರ್ ಸರ್ವಿಸ್ ಪೋರ್ಟಲ್ ಮೂಲಕ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು. 2026ರ ಅಕ್ಟೋಬರ್ 1 ಕ್ಕೆ 18 ವರ್ಷ ತುಂಬುವ ಯುವ ಮತದಾರರೂ ಕೂಡ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಮತದಾರರು ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಕರಡು ಪಟ್ಟಿಯನ್ನು ಪರಿಶೀಲಿಸಿ, ಯಾವುದೇ ಹಕ್ಕು ಮತ್ತು ಆಕ್ಷೇಪಣೆಗಳಿದ್ದಲ್ಲಿ ಆಗಸ್ಟ್ 24 ರಿಂದ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು. ಮ್ಯಾಪಿಂಗ್ ಆಗದೆ ಇರುವ ಮತದಾರರಿಗೆ ನೋಟಿಸ್ ಜಾರಿ ಮಾಡಲಾಗುತ್ತಿದ್ದು, ಮತದಾರರು ನೋಟಿಸಗೆ ಸಂಬಂಧಪಟ್ಟಂತೆ ವಿಚಾರಣೆಗಳನ್ನು ಗ್ರಾಮ ಪಂಚಾಯತ ಮಟ್ಟದಲ್ಲಿ ಜರುಗಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮತಗಟ್ಟೆಗಳ ದೃಢೀಕರಣ ಕಾರ್ಯದ ನಂತರ ಜಿಲ್ಲೆಯಲ್ಲಿ 119 ಹೊಸ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಒಟ್ಟು ಮತಗಟ್ಟೆಗಳ ಸಂಖ್ಯೆ 4,644 ಕ್ಕೆ ಏರಿಕೆಯಾಗಿದೆ. ವಿಧಾನಸಭಾ ಕ್ಷೇತ್ರವಾರು ಮತದಾರರ ಪಟ್ಟಿ ಪರಿಷ್ಕರಣೆಯ ಅಂಗವಾಗಿ ಮತಗಟ್ಟೆಗಳ ಪುನರ ರಚನೆ ಪ್ರಕ್ರಿಯೆ ಪೂರ್ಣಗೊಂಡಿದೆ. 1,200ಕ್ಕಿಂತ ಹೆಚ್ಚು ಮತದಾರರನ್ನು ಹೊಂದಿರುವ ಮತಗಟ್ಟೆಗಳನ್ನು ವಿಭಜಿಸಿ ಹೊಸ ಮತಗಟ್ಟೆಗಳನ್ನು ಸ್ಥಾಪಿಸಿದೆ. ಕಟ್ಟಡಗಳ ಸ್ಥಳ ಬದಲಾವಣೆ ಹಾಗೂ ಹೆಸರು ಬದಲಾವಣೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಪ್ರಶಿಕ್ಷಣಾರ್ಥಿ ಆಯ್.ಎ.ಎಸ್.ಅಧಿಕಾರಿ ರೋಹಿತ್ ಸಿಂಗ್, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *