ಖಾನಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2023ರಲ್ಲಿ ನಡೆದ ಅನುಮಾನಾಸ್ಪದ ಸಾವಿನ ಪ್ರಕರಣದ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆಗಾಗಿ ವಿಶೇಷ ತನಿಖಾ ಸಮಿತಿಯನ್ನು ರಚಿಸಲಾಗಿದೆ.

1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಹಾಗೂ ಜೆಎಂಎಫ್‌ಸಿ (JMFC) ಖಾನಾಪುರ ನ್ಯಾಯಾಲಯದ ಆದೇಶದಂತೆ, ಪೊಲೀಸ್ ಅಧೀಕ್ಷಕರ ಕಚೇರಿಯು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ನೇಮಿಸಿದೆ.

ಸಮಿತಿಯಲ್ಲಿ ಯಾರು ಇದ್ದಾರ

  1. ಡಾ. ಪುಷ್ಪಾ – ವಿಭಾಗದ ಮುಖ್ಯಸ್ಥೆ (HOD), ಬಿಮ್ಸ್
  2. ಡಾ. ರಮೇಶ್ ದುಂಡಗಿ – ಜಿಲ್ಲಾ ಆರೋಗ್ಯಾಧಿಕಾರಿ (DHO), ಬೆಳಗಾವಿ
  3. ಡಾ. ಜಗನ್ನಾಥ್ ಸಿ.ಕೆ. – ಆರ್‌ಎಫ್‌ಎಸ್‌ಎಲ್ (RFSL), ಬೆಳಗಾವಿ
  4. ಮಲ್ಲಿಕಾರ್ಜುನ ಕೊಣ್ಣೂರ – ಸಹಾಯಕ ಕಾರಾಗೃಹ ಅಧೀಕ್ಷಕರು, ಬೆಳಗಾವಿ
  5. ಬಿ.ವಿ. ಪಾಟೀಲ್ – ನಿವೃತ್ತ ಸರ್ಕಾರಿ ಅಭಿಯೋಜಕರು (PP), ಧಾರವಾಡ
  6. ವೀರಯ್ಯ ಹಿರೇಮಠ್ – ಡಿವೈಎಸ್‌ಪಿ, ಬೈಲಹೊಂಗಲ ಉಪವಿಭಾಗ

ಸಮಿತಿಯು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು, ವೈದ್ಯಕೀಯ ವರದಿಗಳು, ವಿಧಿವಿಜ್ಞಾನ ಸಾಕ್ಷ್ಯಗಳು ಹಾಗೂ ಇತರ ಮಾಹಿತಿಗಳನ್ನು ಪರಿಶೀಲಿಸಿ ಸಮಗ್ರ ವರದಿ ಸಲ್ಲಿಸಲಿದೆ.

ಪೊಲೀಸ್ ಇಲಾಖೆಯು ಪ್ರಕರಣದ ಸತ್ಯಾಂಶ ಹೊರಬರಲು ಹಾಗೂ ಪಾರದರ್ಶಕ ತನಿಖೆ ನಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಂಡಿದೆ.

Leave a Reply

Your email address will not be published. Required fields are marked *